ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶದಲ್ಲಿ ಚರ್ಚೆಯ ವಿಷಯವಾಗಿದೆ. ಈ ಘಟನೆಯ ತನಿಖೆಯನ್ನು ಸಿಬಿಐ ಈಗಾಗಲೇ ವಹಿಸಿಕೊಂಡಿದೆ. ತನಿಖೆಯಲ್ಲಿ ಒಂದರ ಹಿಂದೆ ಒಂದರಂತೆ ರೋಚಕ ಮಾಹಿತಿ ಹೊರಬೀಳುತ್ತಿದೆ.
ಇದೀಗ, ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ, ಈ ಅಪರಾಧದಲ್ಲಿ ಅನೇಕ ಜನರು ಭಾಗಿಯಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಅಖಿಲ ಭಾರತ ಸರ್ಕಾರಿ ವೈದ್ಯರ ಸಂಘದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಸುವರ್ಣ ಗೋಸ್ವಾಮಿ ಅವರು ಮರಣೋತ್ತರ ಪರೀಕ್ಷೆಯ ವರದಿಯನ್ನು ರುವುದಾಗಿ ಹೇಳಿದ್ದಾರೆ. ಪಿಎಂ ವರದಿಯ ಪ್ರಕಾರ, ಮಹಿಳಾ ವೈದ್ಯೆಯ ಖಾಸಗಿ ಭಾಗಗಳಲ್ಲಿ 15೦ಮಿ.ಗ್ರಾಂ ವೀರ್ಯ ಪದಾರ್ಥ ಪತ್ತೆಯಾಗಿದೆ. ಇಷ್ಟು ದೊಡ್ಡ ಪ್ರಮಾಣದ ವೀರ್ಯ ಒಬ್ಬ ವ್ಯಕ್ತಿಗೆ ಸೇರಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳುತ್ತಾರೆ. ಇದು ಈ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ನಾನಾ ಸಾಧ್ಯತೆಗಳನ್ನು ಹುಟ್ಟು ಹಾಕಿದೆ.
ಘಟನೆಯಲ್ಲಿ ಹಲವರು ಭಾಗಿಯಾಗಿರುವ ಶಂಕೆ?
ಮಹಿಳಾ ವೈದ್ಯೆಯ ಮೈಮೇಲೆದ್ದ ಗಾಯದ ಗುರುತುಗಳು ಹಾಗೂ ಆಕೆಯ ಮೇಲೆ ಬಲವಂತವಾಗಿ ಹಲ್ಲೆ ನಡೆಸಿರುವುದನ್ನು ನೋಡಿದರೆ ಇದು ಕೇವಲ ಒಬ್ಬ ವ್ಯಕ್ತಿಯ ಕೆಲಸವಾಗಲು ಸಾಧ್ಯವಿಲ್ಲ ಎಂದು ಸುವರ್ಣಾ ಗೋಸ್ವಾಮಿ ಹೇಳಿದ್ದಾರೆ. ಮಹಿಳಾ ವೈದ್ಯೆಯ ಕುಟುಂಬಕ್ಕೂ ಹಲವು ಅನುಮಾನಗಳಿವೆ. ಒಬ್ಬನೇ ಆರೋಪಿ ಎಂಬ ಕೋಲ್ಕತ್ತಾ ಪೊಲೀಸರ ಹೇಳಿಕೆಯನ್ನು ಗೋಸ್ವಾಮಿ ತಳ್ಳಿಹಾಕಿದ್ದಾರೆ. ಸುಣ್ಣ ಬಳಿಯುವ ಕೆಲಸ ಏಕೆ ಮಾಡುತ್ತಿದ್ದಾರೆ? ಎಂದೂ ಅವರು ಪ್ರಶ್ನಿಸಿದ್ದಾರೆ. ವಾಸ್ತವವಾಗಿ, ಈ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯು ಮೊದಲಿನಿಂದಲೂ ಪ್ರಶ್ನಾರ್ಹವಾಗಿದೆ ಎಂಬುವುದು ಉಲ್ಲೇಖನೀಯ.
ಇಷ್ಟೊಂದು ದೊಡ್ಡ ಘಟನೆ ನಡೆದರೂ ಸೆಮಿನಾರ್ ಹಾಲ್ ತೆರೆದಿಡಲಾಗಿತ್ತು, ಗೋಡೆಯೊಂದನ್ನೂ ಕೆಡವಲಾಗಿದೆ ಎಂದು ಧರಣಿ ನಿರತ ವೈದ್ಯರು ದೂರಿದರು. ಅಲ್ಲಿ ರಿಪೇರಿ ಕೆಲಸ ನಡೆಯಬೇಕಿತ್ತು ಎಂಬುದು ಇದರ ಹಿಂದಿನ ತರ್ಕ. ಆದರೆ ಸೆಮಿನಾರ್ ಹಾಲ್ ಪಕ್ಕದ ಕೊಠಡಿಯಲ್ಲಿ ದುರಸ್ತಿ ಕಾರ್ಯ ನಡೆಯಬೇಕಿತ್ತು. ಸೆಮಿನಾರ್ ಹಾಲ್ ಒಳಗೆ ಸಿಸಿಟಿವಿ ಕ್ಯಾಮೆರಾ ಕೂಡ ಇರಲಿಲ್ಲ. ಇದು ಒಂದು ರೀತಿಯ ನಿರ್ಲಕ್ಷ್ಯ. ಸೆಮಿನಾರ್ ಹಾಲ್ ಎದುರು ನಡೆಯುತ್ತಿರುವ ಕಟ್ಟಡ ಕಾಮಗಾರಿಯ ಬಗ್ಗೆಯೂ ಮುಷ್ಕರ ನಿರತ ವೈದ್ಯರು ಪ್ರಶ್ನೆ ಎತ್ತಿದರು. ಸಾಕ್ಷ್ಯ ನಾಶಪಡಿಸಲು ಸೆಮಿನಾರ್ ಹಾಲ್ ಪಕ್ಕದಲ್ಲೇ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ ಎನ್ನುತ್ತಾರೆ ಧರಣಿ ನಿರತ ವೈದ್ಯರು.
ಈ ಘೋರ ಅಪರಾಧ ನಡೆದ ಆಸ್ಪತ್ರೆಯ ಸೆಮಿನಾರ್ ಹಾಲ್ಗೆ ಸೀಲ್ ಹಾಕಬೇಕಿತ್ತು ಎಂದು ಕೋಲ್ಕತ್ತಾದ ಆರ್ಜಿ ಕಾರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಸೆಮಿನಾರ್ ಹಾಲ್ ಅನ್ನು ಏಕೆ ಸೀಲ್ ಮಾಡಿಲ್ಲ? ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು, ಈ ಪ್ರಕರಣದಲ್ಲಿ ಮಹತ್ವದ ವಿಚಾರಗಳನ್ನು ಮುಚ್ಚಿಡಲಾಗುತ್ತಿದೆಯಾ ಎಂಬ ಅನುಮಾನಗಳನ್ನೂ ಸೃಷ್ಟಿಸಿದೆ.