
ಕರ್ನಾಟಕ ಕಲ್ಚರಲ್ ಫೌಂಡೇಷನ್ ಕೆ.ಸಿ.ಎಫ್ ಒಮಾನ್ ವತಿಯಿಂದ ವರ್ಷಂಪ್ರತಿ ಆಚರಿಸುವ ಬೃಹತ್ ಮೀಲಾದ್ ಕಾರ್ಯಕ್ರಮದ ಸ್ವಾಗತ ಸಮಿತಿ ಜೂನ್ 12 ಶುಕ್ರವಾರ ಸೀಬ್ ಮದರಸದಲ್ಲಿ ಸಯ್ಯಿದ್ ಆಬಿದ್ ಅಲ್ ಐದರೂಸಿರವರ ಅಧ್ಯಕ್ಷತೆಯಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಕೆ.ಸಿ.ಎಫ್ ಐ.ಸಿ ನಾಯಕರು, ರಾಷ್ಟ್ರೀಯ ಸಮಿತಿಯ ಅಧ್ಯಕ್ಷರು, ಪ್ರ.ಕಾರ್ಯದರ್ಶಿ, ಕೋಶಾಧಿಕಾರಿ ಸಹಿತ ವಿವಿಧ ಝೋನ್ ಗಳಿಂದ ಆಗಮಿಸಿದ ನಾಯಕರ ಉಪಸ್ಥಿತಿಯಲ್ಲಿ ಸ್ವಾಗತ ಸಮಿತಿ ರಚಿಸಲಾಯಿತು.
ಚಯಾರ್ಮ್ಯಾನ್ ಉಮ್ಮರ್ ಸಖಾಫಿ ಎಡಪಾಲ,
ಕನ್ವೀನರ್ ಸ್ವಾದಿಖ್ ಹಾಜಿ ಸುಳ್ಯ ಹಾಗೂ
ಕೋಶಾಧಿಕಾರಿ ರಿಯಾಝ್ ಮಂಜನಾಡಿ
ವೈಸ್ ಚಯರ್ಮ್ಯಾನ್ ಸಯ್ಯಿದ್ ಆಬಿದ್
ಅಲ್ ಐದರೂಸಿ ಎಮ್ಮೆಮಾಡು, ವೈಸ್ ಕನ್ವೀನರ್ ಲತೀಫ್ ಮಂಜೇಶ್ವರ ಮತ್ತು ವಿವಿಧ ವಿಭಾಗಗಳಿಗೆ ಪ್ರತ್ಯೇಕ ತಂಡಗಳನ್ನು ರಚಿಸಲಾಯಿತು.
“RABEEH 26 – Grand Meelad Conference” ಕಾರ್ಯಕ್ರಮದ ಅಧಿಕೃತ ಪೋಸ್ಟರ್ ಬಿಡುಗಡೆ ಸಮಾರಂಭವು ಸ್ವಹಾಬೇ ರಸೂಲ್ ಮಾಝಿನ್ (ರ.ಅ.) ಅವರ ಸನ್ಮಿಧಿಯಲ್ಲಿ ಗೌರವಯುತವಾಗಿ ನೆರವೇರಿತು.
ಈ ಸಂದರ್ಭದಲ್ಲಿ ಕೆ ಸಿಎಫ್ ಅಂತರಾಷ್ಟ್ರೀಯ ನಾಯಕರೂ ಮೀಲಾದ್ ಸ್ವಾಗತ ಸಮಿತಿಯ ಉಪಾಧ್ಯಕ್ಷರೂ ಆದ ಸಯ್ಯಿದ್ ಆಬಿದ್ ಅಲ್ ಐದರೂಸಿ, KCF ಒಮಾನ್ ಅಧ್ಯಕ್ಷರಾದ ಹಂಝ ಹಾಜಿ ಕನ್ನಂಗಾರ್, ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಪಾಲೆತಡ್ಕ, ಮೀಲಾದ್ ಸ್ವಾಗತ ಸಮಿತಿ ಕನ್ವಿನರ್ ಸ್ವಾದಿಕ್ ಹಾಜಿ, ಉಪ ಕನ್ವೀನರ್ ಲತೀಫ್ ಮಂಜೇಶ್ವರ, ಅಂತಾರಾಷ್ಟ್ರೀಯ ಸಮಿತಿ ಇಹ್ಸಾನ್ ಇಲಾಖೆ ಅಧ್ಯಕ್ಷರಾದ ಅಯ್ಯೂಬ್ ಕೋಡಿ, ಆರಿಫ್ ಕೋಡಿ, ಇಬ್ರಾಹಿಂ ಹಾಜಿ ಅತ್ರಾಡಿ ಹಾಗೂ KCF ಒಮಾನ್ ರಾಷ್ಟ್ರೀಯ ಸಮಿತಿಯ ನಾಯಕರು ಮತ್ತು ಮೀಲಾದ್ ಸ್ವಾಗತ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಪ್ರವಾದಿ ಮುಹಮ್ಮದ್ ﷺ ಅವರ ಆದರ್ಶ ಜೀವನ ಸಂದೇಶವನ್ನು ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ಆಯೋಜಿಸಲಾಗುತ್ತಿರುವ “RABEEH 26 – Grand Meelad Conference” ಕಾರ್ಯಕ್ರಮವು “ಪ್ರವಾದಿ ﷺ ರವರ ಜೀವನ ಮಾನವತೆಗೆ ಮಾದರಿ”
(The Prophet’s ﷺ life is a model for humanity) ಎಂಬ ಘೋಷ ವಾಕ್ಯದೊಂದಿಗೆ 2026ರ ಸೆಪ್ಟೆಂಬರ್ 11ರಂದು (ಶುಕ್ರವಾರ) ಸಂಜೆ 6.00 ಗಂಟೆಗೆ, ಮಸ್ಕತ್ನ ಅಲ್ ಖುವೈರ್ನಲ್ಲಿರುವ ಮಸ್ಕತ್ ಹಾಲಿಡೇ ಹೋಟೆಲಿನ ಸೂರ್ ಬಾಲ್ ರೂಮ್ ಸಭಾಂಗಣದಲ್ಲಿ ನಡೆಯಲಿದೆ.
ಮೀಲಾದ್ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ KCF ಒಮಾನ್ ರಾಷ್ಟ್ರೀಯ ಸಮಿತಿಯು ಸಮಸ್ತ ಕನ್ನಡಿಗರು ಹಾಗೂ ಪ್ರವಾದಿ ಪ್ರೇಮಿಗಳಿಗೆ ಮನವಿ ಮಾಡಿದೆ.
ವರದಿ:
KCF ಒಮಾನ್







