ದ್ವಿಚಕ್ರ ವಾಹನ ಸವಾರನೋರ್ವನ ಮೇಲೆ ಕಾಡು ಹಂದಿಯೊಂದು ದಾಳಿ ಮಾಡಿದ ಪರಿಣಾಮ, ಯುಕನೋರ್ವ ಗಾಯಗೊಂಡ ಘಟನೆ ಇಂದು ಮುಂಜಾನೆ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಮೀಪದ ಕುರುಂಜ ಮಣ್ಣಾಪು ಎಂಬಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಧನುಷ್(30) ಗಾಯಗೊಂಡವರು.ಕುಂಬ್ರ ಪೆಟ್ರೋಲ್ ಬಂಕ್ ನಲ್ಲಿ ಮ್ಯಾನೇಜರ್ ಆಗಿರುವ ಧನುಷ್ ಎಂದಿನಂತೆ ಇಂದು ಬೆಳಗ್ಗೆ ಸ್ಕೂಟರ್ ನಲ್ಲಿ ಪೆಟ್ರೋಲ್ ಬಂಕ್ ಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕುರುಂಜ ಮಣ್ಣಾಪು ತಲುಪಿದಾಗ ಏಕಾಏಕಿ ಕಾಡು ಹಂದಿಯೊಂದು ಧನುಷ್ ಚಲಾಯಿಸುತ್ತಿದ್ದ ಸ್ಕೂಟರ್ ಮೇಲೆ ಎರಗಿದೆ. ಈ ವೇಳೆ ಧನುಷ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ. ಬಳಿಕ ಕಾಡುಹಂದಿ ಧನುಷ್ ಮೇಲೆ ಎರಗಿದ್ದು, ಅವರ ಬಲ ಕೈಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ಇದರೊಂದಿಗೆ ಆತನ ಇತರ ದೇಹದ ಭಾಗಗಳಿಗೆ ಗಾಯಗೊಳಿಸಿದೆ. ಗಾಯಾಳುವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
-
ನಟ ಕಲಾಭವನ್ ನವಾಸ್ ಚೊಟ್ಟನಿಕ್ಕರ ಹೋಟೆಲ್ ನಲ್ಲಿ ಶವವಾಗಿ ಪತ್ತೆ
ಮಲಯಾಳಂ ನಟ ಮತ್ತು ಮಿಮಿಕ್ರಿ ಕಲಾವಿದ ಕಲಾಭವನ್ ನವಾಸ್ ಶುಕ್ರವಾರ ಕೊಚ್ಚಿಯ ಚೊಟ್ಟನಿಕ್ಕರದಲ್ಲಿರುವ ಹೋಟೆಲ್‌ನಲ್ಲಿ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಅವರಿಗೆ ಸುಮಾರು 51 ವರ್ಷ ವಯಸ್ಸಾಗಿತ್ತು. ವರದಿಗಳ ಪ್ರಕಾರ, ಶುಕ್ರವಾರ ಸಂಜೆ ಅವರು ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಕಲಾಭವನ್ ನವಾಸ್ ಅವರ ತಂದೆ ಚಲನಚಿತ್ರ ನಟ ಅಬೂಬಕರ್. ನವಾಸ ಮಿಮಿಕ್ರಿ ಮೂಲಕವೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. 1995 ರಲ್ಲಿ ಬಿಡುಗಡೆಯಾದ ಚೈತನ್ಯಂ ಚಿತ್ರದ ಮೂಲಕ ತನ್ನ ಸಿನಿಮಾ…
-
ವಿರಾಟ್ ಕೊಹ್ಲಿ, ಧೋನಿ ಜೊತೆ ಸೌಹಾರ್ದ ಕ್ರಿಕೆಟ್ ಪಂದ್ಯಕ್ಕಾಗಿ ‘ಲಿಯೋನೆಲ್ ಮೆಸ್ಸಿ’ ಭಾರತಕ್ಕೆ ಭೇಟಿ
Nammasullia: ಡಿಸೆಂಬರ್ 13-15ರ ನಡುವೆ ಮೂರು ನಗರಗಳ ಪ್ರವಾಸದ ಭಾಗವಾಗಿ ಅರ್ಜೆಂಟೀನಾದ ನಾಯಕ ಮತ್ತು ವಿಶ್ವಕಪ್ ವಿಜೇತ ಲಿಯೋನೆಲ್ ಮೆಸ್ಸಿ ನಗರಕ್ಕೆ ಭೇಟಿ ನೀಡಲಿದ್ದಾರೆ ಎಂದು ಮುಂಬೈನ ಫುಟ್ಬಾಲ್ ಅಭಿಮಾನಿಗಳು ಖುಷಿಯಿಂದ ಕಾಯುತ್ತಿದ್ದಾರೆ. ವರದಿಯ ಪ್ರಕಾರ, ಎಂಸಿಎ ಮೂಲವೊಂದು ನಗರಕ್ಕೆ ಅವರ ಭೇಟಿಯ ಸುದ್ದಿಯನ್ನು ದೃಢಪಡಿಸಿದೆ. “ಡಿಸೆಂಬರ್ 14 ರಂದು ಮೆಸ್ಸಿ ವಾಂಖೆಡೆ ಕ್ರೀಡಾಂಗಣದಲ್ಲಿ ಇರುತ್ತಾರೆ. ಅವರು ಮಾಜಿ ಮತ್ತು ಹಾಲಿ ಕ್ರಿಕೆಟಿಗರೊಂದಿಗೆ ಕ್ರಿಕೆಟ್ ಪಂದ್ಯವನ್ನ ಆಡುವ ಸಾಧ್ಯತೆಯಿದೆ. ಎಲ್ಲವೂ ಅಂತಿಮಗೊಂಡ ನಂತರ ಸಂಘಟಕರು ಸಂಪೂರ್ಣ ವೇಳಾಪಟ್ಟಿಯನ್ನ…
-
ಕಲ್ಲುಗುಂಡಿ: ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ವಾಹನ ಪಲ್ಟಿ
Nammasullia: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ 275 ರ ಕಲ್ಲುಗುಂಡಿ ಕಡೆಪಾಲದಲ್ಲಿ ಮಿನಿ ಗೂಡ್ಸ್ ವಾಹನ ಪಲ್ಟಿಯಾದ ಘಟನೆ ವರದಿಯಾಗಿದೆ. ಕೌಡಿಚಾರ್ ಮೂಲದ ಅಶೋಕ ಹೋಲ್ ಸೇಲ್ ಚಾಟ್ ಐಟಂಸ್ ಸಪ್ಲೈ ವಾಹನ ಇಂದು ಮಧ್ಯಾಹ್ನ ಪಲ್ಟಿಯಾಗಿದೆ. ಪಾನಿ ಪೂರಿಯ ಪೂರಿ ಲೈನ್ ಸೇಲ್ ಮಾಡುವ ವಾಹನಕ್ಕೆ ಎದುರಿನಿಂದ ಓವರ್ ಟೇಕ್ ಮಾಡಿಕೊಂಡು ಒಂದು ಕಾರು ಬಂದಿದೆ. ಇದಕ್ಕೆ ಸೈಡ್ ಕೊಡುವ ಸಂದರ್ಭದಲ್ಲಿ ಈ ಮಿನಿ ವಾಹನ ಬರೆಗೆ ಗುದ್ದಿ ಪಲ್ಟಿಯಾಗಿದೆ. ಘಟನೆ ಕಣ್ಣೆದುರು ನಡೆದಿದ್ದರೂ ಕಾರು…