ಉಡುಪಿ: ಉಡುಪಿ ಜಿಲ್ಲೆಯಲ್ಲಿ ಟೆಂಪಲ್ ರನ್ ನಲ್ಲಿರುವ ತೆಲುಗಿನ ಸೂಪರ್ ಸ್ಟಾರ್ ಜ್ಯೂನಿಯರ್ ಎನ್ ಟಿಆರ್ ರಿಷಬ್ ಶೆಟ್ಟಿ ತವರೂರು ಕೆರಾಡಿ ಗ್ರಾಮದ ಮೂಡುಗಲ್ಲು ಕೇಶವನಾಥೇಶ್ವರ ಗುಹಾಂತರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ನಟ ರಿಷಬ್ ಶೆಟ್ಟಿ ಜೊತೆ ಉಡುಪಿ ಜಿಲ್ಲೆಯ ಪ್ರವಾಸದಲ್ಲಿರುವ ಜೂನಿಯರ್ ಎನ್‌ಟಿಆರ್‌ ಅವರನ್ನು ರಿಷಬ್ ಶೆಟ್ಟಿ ತಮ್ಮ ಊರಾದ ಕೆರಾಡಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಯ ಕೆರಾಡಿ ಗ್ರಾಮದ ಮೂಡುಗಲ್ಲು ಕೇಶವನಾಥೇಶ್ವರ ಗುಹಾಂತರ ದೇವಸ್ಥಾನಕ್ಕೆ ಹೋಗಿರುವ ಜೂನಿಯರ್ ಎನ್‌ಟಿಆರ್‌ ಅಮ್ಮನ ಆಸೆ ತೀರಿಸಲು ಶಿವನ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕಾಡು, ಬಂಡೆ ನಡುವೆ ಇರುವ ಪ್ರಾಕೃತಿಕ ರಮಣೀಯತೆಗೆ ತಾರಕ್ ಮಾರುಹೋಗಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಕೂಡಾ ಜೊತೆಗಿದ್ದರು.ನಾಲ್ಕು ದಶಕದ ನಂತರ ಜೂ.ಎನ್‌ಟಿಆರ್ ತಾಯಿ ಶಾಲಿನಿ ನಂದಮೂರಿ ಕರಾವಳಿಗೆ ಬಂದಿದ್ದಾರೆ. ಪತ್ನಿ ಲಕ್ಷ್ಮಿ ಪ್ರಣತಿ, ಪ್ರಗತಿ ರಿಷಬ್, ಪ್ರಶಾಂತ್ ನೀಲ್, ಲಿಖಿತಾ ನೀಲ್ ಮೂಕಾಂಬಿಕೆಯ ದರ್ಶನ ಮಾಡಿ ಪ್ರಾಂಗಣದಲ್ಲಿರುವ ಗುಡಿಗಳಿಗೆ ಭೇಟಿ ಕೊಟ್ಟು ಪ್ರಸಾದ ಸ್ವೀಕರಿಸಿದ್ದರು.

Leave a Reply

Your email address will not be published. Required fields are marked *