ಸುನ್ನಿ ಮುಸ್ಲಿಂ ಜುಮಾ ಮಸೀದಿ ಕೊಯನಾಡು ಇದರ ತಶ್ನಿಮೇ ಇಶ್ಕ್ 2K24 ಈದ್ ಮಿಲಾದ್ ಕಾರ್ಯಕ್ರಮದ ಆಮಂತ್ರಣ ಬಿಡುಗಡೆಯು ಇಂದು ಜುಮಾ ನಮಾಜಿನ ಬಳಿಕ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷರಾದ ಅಬ್ದುಲ್ ರಜಾಕ್ ರವರು ಬಿಡುಗಡೆಗೊಳಿಸಿದರು.
ಸೆಪ್ಟೆಂಬರ್ 16 ಸೋಮವಾರ ಬೆಳಗ್ಗೆ 8:30 ಕ್ಕೆ ಧ್ವಜಾರೋಹಣ, 9:00 ಗಂಟೆಗೆ ಸ್ವಲಾತ್ ಜಾಥಾ, ತದನಂತರ 11 ಗಂಟೆಗೆ ಗ್ರ್ಯಾಂಡ್ ಮೌಲಿದ್ ಪಾರಾಯಣ ನಡೆಯಲಿದೆ , ನಂತರ ಅಸರ್ ನಮಾಜಿನ ಬಳಿಕ ಮದ್ರಸ ವಿಧ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ, ರಾತ್ರಿ 8 ಗಂಟೆಗೆ ಸಭಾ ಕಾರ್ಯಕ್ರಮ ಹಾಗೂ ಬಹುಮಾನ ನಡೆಯಲಿದೆ.
ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಸೀದಿ ಖತೀಬ್ ಮಹಮ್ಮದ್ ಸಖಾಫಿ ಅಲ್ ಹಿಕಮಿ, ಸದರ್ ಮುಅಲ್ಲಿಂ ನೌಶದ್ ಫಾಳಿಲಿ, NIA ಅಧ್ಯಕ್ಷ ನಝೀರ್ ಮಾಡಶೇರಿ, ಮಾಜಿ ಅಧ್ಯಕ್ಷರುಗಳಾದ ಅಲವಿ ಕುಟ್ಟಿ, ಮೊಯಿದಿನ್ ಕುಂಞ, ಅಬ್ದುಲ್ ರಹಿಮಾನ್ ಎಸ್ ಪಿ, ಸದಸ್ಯರಾದ ಹನೀಫ್ ಎಸ್ ಪಿ, ಹ್ಯಾರಿಸ್ ಎಂ ಹೆಚ್, ಜಾಕೀರ್ , ಹಾಗೂ ಇನ್ನಿತರ ಸದಸ್ಯರು, ಸರ್ವ ಜಮಾಅತರು ಹಾಜರಿದ್ದರು.