ಉಪ್ಪಳದ ಮನೆಯೊಂದಕ್ಕೆ ದಾಳಿ ನಡೆಸಿದ ಡಿವೈಎಸ್‌ಪಿ ಮನೋಜ್ ನೇತೃತ್ವದ ಪೊಲೀಸ್ ತಂಡ ಸುಮಾರು 3.5 ಕೋಟಿ ರೂ. ನ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಉಪ್ಪಳ ಪತ್ವಾಡಿ ಸಮೀಪದ ಮನೆಯಿಂದ ಎಂಡಿಎಂಎ ಸೇರಿದಂತೆ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಸ್ಗರ್ ಅಲಿ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳಲಾಗಿದೆ.ಆಗಸ್ಟ್ 30 ರಂದು ಮೇಲ್ಪರಂಬದಲ್ಲಿ 49.33 ಗ್ರಾಂ ಎಂಡಿಎಂಎ ಸಹಿತ ಅಬ್ದುಲ್ ರಹೀಂ ಎಂಬಾತನನ್ನು ಬಂಧಿಸಲಾಗಿತ್ತು. ಈತನಿಂದ ಲಭಿಸಿದ ಖಚಿತ ಮಾಹಿತಿ ಮೇರೆಗೆ ಉಪ್ಪಳದ ಮನೆಗೆ ದಾಳಿ ನಡೆಸಲಾಗಿದೆ.
ಕಾರ್ಡ್ ಬೋರ್ಡ್ ಪೆಟ್ಟಿಗೆಯಲ್ಲಿರಿಸಲಾಗಿದ್ದ 3ಕಿಲೋ ಎಂಡಿಎಂಎ ಹಾಗೂ ಒಂದು ಕಿಲೋ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ ಹಲವಾರು ಮಾದಕ ದ್ರವ್ಯ ಹಾಗೂ ಮಾತ್ರೆಯನ್ನು ವಶಪಸಿಕೊಳ್ಳಲಾಗಿದೆ. ಹಲವು ವರ್ಷಗಳ ಹಿಂದೆ ಈ ಮನೆಯನ್ನು ಖರೀದಿಸಿ ಮಾದಕ ವಸ್ತು ವಹಿವಾಟು ನಡೆಸಿದ್ದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ.