ಸುಳ್ಯ: ನಾಡ ಹಬ್ಬ ದಸರಾ ಪ್ರಯುಕ್ತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಸೆ.22 ರಂದು ಸುಳ್ಯ ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾಟ ಸುಳ್ಯದ ಪ್ರಥಮ ದರ್ಜೆ ಕಾಲೇಜು ಕೊಡಿಯಾಲುಬೈಲಿನಲ್ಲಿ ನಡೆಯಿತು.
ಒಟ್ಟು ಹತ್ತು ತಂಡಗಳು ಭಾಗವಹಿಸಿದ್ದು, ಜೆ.ಬಿ ಯುನೈಟೆಡ್ ಹಾಗೂ ಕೆವಿಜಿ ಕ್ಯಾಂಪಸ್ ಫೈನಲ್ ಪ್ರವೇಶಿಸತು. ಫೈನಲ್ ಹಣಾಹಣಿಯಲ್ಲಿ 0-0 ಪಂದ್ಯ ಸಮಬಲಗೊಂಡಿತು.ನಂತರದ ಟೈ ಬ್ರೇಕರ್ ನಲ್ಲಿ 4-2 ಮುನ್ನಡೆಯನಲ್ಲಿ ಜೈ ಭಾರತ್ ತಂಡವನ್ನು, ಕೆವಿಜಿ ಕ್ಯಾಂಪಸ್ ತಂಡ ಸೋಲಿಸಿ, ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.