ಕಾರವಾರ : ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಹಾಗೂ ಅದರ ಚಾಲಕ ಅರ್ಜುನ್ ಅವರ ಮೃತದೇಹ ಪತ್ತೆಯಾಗಿದೆ.
ಶಿರೂರು ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆ ಆರನೇ ದಿನ ಮುಂದುವರಿದಿದ್ದು , ನದಿಯಲ್ಲಿ ಮುಳುಗಿದ್ದ ಕೇರಳದ ಲಾರಿ ಪತ್ತೆ ಯಾಗಿದೆ ಎಂದು ಕಾರ್ಯಾಚರಣೆ ಮಾಡುತ್ತಿರುವ ತಂಡ ತಿಳಿಸಿದೆ. ಅದರಲ್ಲಿ ಅರ್ಜುನ್ ಮೃತದೇಹ ಕೂಡ ಪತ್ತೆಯಾಗಿರುವ ಕುರಿತು ಉ.ಕ ಎಸ್ಪಿ ಮಾಹಿತಿ ನೀಡಿದ್ದಾರೆ.
ಡ್ರಜ್ಜಿಂಗ್ ಯಂತ್ರ ಹಾಗೂ ಕ್ರೇನ್ ಮೂಲಕ ಲಾರಿ ಮೇಲೆತ್ತುವ ಪ್ರಕ್ರಿಯೆ ಕೆಲವೇ ಕ್ಷಣದಲ್ಲಿ ಆರಂಭವಾಗಲಿದೆ. ಶಿರೂರು ಮಣ್ಣು ಕುಸಿತದ ಘಟನೆಯಲ್ಲಿ ಇಬ್ಬರ ಶವ ಇನ್ನು ಪತ್ತೆಯಾಗಬೇಕಿದೆ. ಕೇರಳರ ಲಾರಿ ಪತ್ತೆಯಾಗಿದ್ದು, ಅದರ ಚಾಲಕ ಅರ್ಜುನ್ ಸಹ ಸಿಕ್ಕಿದಂತಾಗಿದೆ.