ಮೂರು ತಿಂಗಳ ಗರ್ಭಿಣಿ ನೇಣು ಬಿಗಿದು ಆತ್ಮಹತ್ಯೆ ಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಕಯ್ಯಾರ್ ಕನ್ನಟಿಪ್ಪಾರೆ ಶಾಂತಿಯೋಡು ನಿವಾಸಿ ಜನಾರ್ಧನ (39) ಬಂಧಿತ. ಪತ್ನಿ ಮಂಗಳೂರು ವಾಮಂಜೂರು ಪಿಲಿಕುಳ ದ ವಿಜೇತ ( 32) ಆಗಸ್ಟ್ 18 ರಂದು ಮನೆ ಯೊಳಗೆ ಫ್ಯಾನ್ ಗೆ ನೇಣು ಬಿಗಿದು ಮೃತ ಪಟ್ಟ ಸ್ಥಿತಿಯಲ್ಲಿ ಪತ್ತೆ ಯಾಗಿದ್ದರು. ಪೊಲೀಸರು ನಡೆಸಿದ ತನಿಖೆ ಯಿಂದ ವಿಜೇತ ಆತ್ಮಹತ್ಯೆ ಕುರಿತು ಬರೆದಿಟ್ಟಿದ್ದ ಪತ್ರ ಲಭಿಸಿತ್ತು. ದೈಹಿಕ ಹಾಗೂ ಮಾನಸಿಕ ಕಿರುಕುಳ ದಿಂದ ಆತ್ಮಹತ್ಯೆ ಮಾಡಿ ಕೊಂಡಿರುವುದಾಗಿ ತನಿಖೆಯಿಂದ ಸ್ಪಷ್ಟ ಗೊಂಡಿತ್ತು.ವಿಜೇತ ರ ಸಾವಿಗೆ ಜನಾರ್ಧನ ನ ಕಿರುಕುಳ ಕಾರಣ ಎಂದು ತನಿಖೆಯಿಂದ ತಿಳಿದುಬಂದಿತ್ತು. ಆರೋಪಿಯನ್ನು ಕುಂಬಳೆ ಪೊಲೀಸರು ಬಂಧಿಸಿ, ಕಾಸರಗೋಡು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.