ಶಾಂತಿನಗರ ಮುಸ್ಲಿಂ ವೆಲ್ವೇರ್ ಅಸೋಸಿಯೇಷನ್ ರಿ ವತಿಯಿಂದ ನೂರುಲ್ ಇಸ್ಲಾಂ ಮದರಸದಲ್ಲಿ ಹುಬ್ಬುರಸೂಲ್ ಮಿಲಾದ್ ಫೆಸ್ಟ್ ವಿದ್ಯಾರ್ಥಿಗಳ ಪ್ರತಿಭಾ ಸಂಗಮ ಹಾಗೂ ಮೌಲಿದ್ ಪಾರಾಯಣ ಮಜ್ಜಿಸ್ ಸೆ. 29 ರಂದು ನಡೆಯಿತು. ಉದ್ಘಾಟನಾ ಸಮಾರಂಭವನ್ನು ಜಯನಗರ ಜನ್ನತುಲ್ ಉಲೂಂ ಮದರಸದ ಸದರ್ ಮುಅಲ್ಲಿಮ್ ಶಫೀಕ್ ಹಿಮಮಿ ದುವಾ ಮೂಲಕ ಉದ್ಘಾಟಿಸಿದರು.
ಸದರ್ ಮುಅಲ್ಲಿಂ NIM ಅಧ್ಯಕ್ಷತೆಯನ್ನು ಮುಸ್ಲಿಂ ವೆಲ್ವೇರ್ ಅಸೋಸಿಯೇಶನ್ ಹಾಗೂ ನೂರುಲ್ ಇಸ್ಲಾಂ ಮದರಸದ ಅಧ್ಯಕ್ಷ ಹಾಜಿ ಪಳ್ಳಿ ಕುಂಚಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎನ್ ಐ ಎಂ ಮೊಗರ್ಪಣೆಯ ಅಧ್ಯಾಪಕರು ಗಳಾದ ಅಬ್ದುಲ್‌ನಾಸಿರ್ ಸಖಾಫಿ, ಯೂಸುಫ್ ಮುಸ್ಲಿಯಾರ್, ಹಂಝ ಸಖಾಫಿ, ಅಬೂಬಕರ್ ಸಿದ್ದೀಕ್ ಸಅದಿ,ಮೂಸ ಮುಸ್ಲಿಯಾರ್,ಹಾಗೂ ಪೈಚಾರ್ ಮದರಸದ ಸದರ್ ಮುಅಲ್ಲಿಂ ಹಂಝ ಝುಹರಿ ಕುಂಜಿಲ,ಹಿರಿಯ ರಾದ ಜನಾಬ್ ಅಬ್ದುಲ್ಲಾ ಬನ್ನೂರು,ಶಾಫಿ ಪ್ರಗತಿ, ಉಪಾಧ್ಯಕ್ಷರು, ಮುಸ್ಲಿಂ ವೆಲ್ವೇರ್ ಅಸೊಸಿಯೇಶನ್,
ನೂರುಲ್ ಇಸ್ಲಾಂ ಮದರಸ ಶಾಂತಿನಗರ, ಮುಹಮ್ಮದ್ ತ್ವಾಹ ಉದ್ಯಮಿಗಳು,ಹಸೈನಾರ್ ಜಯನಗರ ವರದಿಗಾರರು, ಸುದ್ದಿ ವಾರಪತ್ರಿಕೆ ಸುಳ್ಯ ಮೊದಲಾದವರು ಉಪಸ್ಥಿತರಿದ್ದರು.ವೇದಿಕೆಯಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಸಂಗಮ ನಡೆಯಿತು.
ರಾತ್ರಿ 7 ಗಂಟೆಗೆ ಮೌಲಿದ್ ಮಜ್ಜಿಸ್ ಹಾಗೂ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ನಡೆದು ಅಧ್ಯಕ್ಷತೆಯನ್ನು ಮೊಗರ್ಪಣೆ ಎಚ್ ಐ ಜೆ ಕಮಿಟಿ ಅಧ್ಯಕ್ಷ ಇಬ್ರಾಹಿಂ ಹಾಜಿ ಸೀಫುಡ್ ವಹಿಸಿದ್ದರು.
ಉದ್ಘಾಟನೆಯನ್ನು ಪೈಚಾರ್ ಬದ್ರಿಯಾ ಜುಮ್ಮಾಮಸ್ಟಿದ್ ಖತೀಬರಾದ ಸಮೀರ್ ನಈಮಿ ನೆರವೇರಿಸಿದರು.
ಮುಖ್ಯ ಪ್ರಭಾಷಣ ಮತ್ತು ಮೌಲಿದ್ ನೇತೃತ್ವವನ್ನು ಮೊಗರ್ಪಣೆ ಮುಹಿಯದ್ದೀನ್ ಜುಮ್ಮಾಮ್‌ಸ್ಟಿದ್ ಮುದರಿಸ್ ಹಾಫಿಲ್ ಸೌಕತ್ ಅಲಿ ಸಖಾಫಿ ನೆರವೇರಿಸಿದರು.
ವೇದಿಕೆಯಲ್ಲಿ ಹಾಜಿ ಪಳ್ಳಿಕುಂಞ,ಮೊಗರ್ಪಣೆ ಕಮಿಟಿ ಉಪಾಧ್ಯಕ್ಷ ಉಸ್ಮಾನ್ ಸಿ.ಎಂ.ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್ ಅರಂಬೂರು, ವಲ್ಫ್ ಬೋರ್ಡ್ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಮೊಗರ್ಪಣೆ,ಪೈಚಾರ್ ಮಸೀದಿ ಅಧ್ಯಕ್ಷ ಪಿ. ಇಬ್ರಾಹಿಂ ಹಾಜಿ,ಜಯನಗರ ಮದರಸ ಸಮಿತಿ ಅಧ್ಯಕ್ಷ ಜನಾಬ್ ಅಬ್ದುಲ್ಲ ಹಾಜಿ, ಮುಸ್ಲಿಂ ವಲ್ವೇರ್ ಅಸೋಸಿಯೇಶನ್ ಸ್ಥಾಪಕ ಅಧ್ಯಕ್ಷ ಎ ಅಬೂಬಕ್ಕರ್ ಮೊದಲಾದವರು ಉಪಸ್ಥಿತರಿದ್ದರು.
ಸ್ಥಳೀಯ ಮದರಸ ಸದರ್ ಮುಅಲ್ಲಿಮ್ ಅಬ್ದುಲ್ ರಶೀದ್ ಝನಿ ಸ್ವಾಗತಿಸಿ ನಿರೂಪಣೆ ಮಾಡಿದರು. ಪೈಚಾರ್ ಮದರಸ ವಿದ್ಯಾರ್ಥಿಗಳಿಂದ ಆಕರ್ಷಕ ದಫ್ ಪ್ರದರ್ಶನ ನಡೆಯಿತು.ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ನಡೆಯಿತು.ಸಮಿತಿಯ ಸರ್ವ ಸದಸ್ಯರು ಸಹಕರಿಸಿದರು.