ಸುಳ್ಯದ ಕುರುಂಜಿ ವೆಂಕಟರಮಣ ಗೌಡ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ತಲೆಯಲ್ಲಿ ಅಕ್ಟೋಬರ್ 12ರಿಂದ 18ರವರೆಗೆ ನಡೆಯಲಿದ್ದು ಆ ಬಗ್ಗೆ ಪೂರ್ವಭಾವಿ ಸಭೆಯು ನಡೆಯಿತು.
ಕಾಲೇಜಿನ ಪ್ರಾಂಶುಪಾಲ ಶ್ರೀಧರ ಎಂ.ಕೆ ಅಧ್ಯಕ್ಷತೆ ವಹಿಸಿದ್ದರು. ಸಭಾ ವೇದಿಕೆಯಲ್ಲಿ ಗ್ರಾಮ ಪಂಚಾಯತ್ ನ ಅಧ್ಯಕ್ಷ ಕೇಶವ ಅಡ್ತಲೆ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಲೋಹಿತ್ ಮೇಲಡ್ತಲೆ ,ಹಾಗೂ ಶಾಲಾ ಮುಖ್ಯ ಗುರುಗಳಾದ ಮುಕುಂದ ದೇರಾಜೆ ಉಪಸ್ಥಿತರಿದ್ದರು. ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭವಾನಿ ಶಂಕರ ಅಡ್ತಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ ಶಿಬಿರದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು.


ನಿವ್ರತ್ತ ಮುಖ್ಯೋಪಾಧ್ಯಾಯ ಗಣೇಶ್ ಮಾಸ್ಟರ್ ಆಡ್ತಲೆ, ಸ್ಪಂದನ ಗೆಳೆಯರ ಬಳಗದ ಅಧ್ಯಕ್ಷ ವಿನಯ ಬೆದ್ರುಪಣೆ, ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ, ಅಂಬೇಡ್ಕರ್ ರಕ್ಷಣಾ ವೇದಿಕೆಯ ಅಧ್ಯಕ್ಷ ನವೀನ್ ಕಲ್ಲುಗುಡ್ಡೆ, ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಮೋಹನ್ ಅಡ್ತಲೆ, ನವೋದಯ ಸ್ವಸಹಾಯ ಸಂಘ ಮತ್ತು ಸ್ತ್ರೀಶಕ್ತಿ ಸಂಘಗಳ ಅಧ್ಯಕ್ಷರುಗಳು ಮತ್ತು ಸದಸ್ಯರುಗಳು ಹಾಗೂ ಹಾಗೂ ಎನ್ಎಸ್ಎಸ್ ಸ್ವ ಯಂ ಸೇವಕರು
ಗಳಾದ ಮನ್ವಿತ್ ನಮೃತ್ ಹಾಗೂ ಲಿರಾಸ್ ಉಪಸ್ಥಿತರಿದ್ದರು.

ಸ್ಥಳೀಯ ಸಮಿತಿ ರಚನೆ: ಸಭೆಯಲ್ಲಿ ಶಿಬಿರದ ಯಶಸ್ಸಿಗೆ ಸ್ಥಳೀಯ ಸಮಿತಿಯನ್ನು ರಚನೆ ಮಾಡಲಾಯಿತು. ಸ್ಥಳೀಯ ಸಮಿತಿಯ ಅಧ್ಯಕ್ಷರಾಗಿ ಗಣೇಶ್ ಮಾಸ್ತರ್ ಅಡ್ತಲೆ, ಉಪಾಧ್ಯಕ್ಷರಾಗಿ ಹರೀಶ್ ಎ.ಕೆ ಅಡ್ತಲೆ ಕಾರ್ಯದರ್ಶಿಯಾಗಿ ಮೋಹನ್ ಅಡ್ತಲೆ, ನಿರ್ದೇಶಕರಾಗಿ ದಿಲ್ಲಿ ಕುಮಾರ ಕಾಯರ, ಶಶಿಕುಮಾರ್ ಉಳುವಾರು, ದುರ್ಗಾ ಪ್ರಸಾದ ಮೇಲಡ್ತಲೆ,‍ ಶ್ಯಾಮಲಾ ಅಡ್ತಲೆ , ದೊಡ್ಡಯ್ಯ ಪಿಂಡಿಮನೆ ಹಾಗೂ ಸುಜಯ ಮೇಲಡ್ತಲೆಯವರನ್ನು ಆಯ್ಕೆ ಮಾಡಲಾಯಿತು.‌
ಶಾಲಾ ಮುಖ್ಯೋಪಾದ್ಯಾಯ ಮುಕುಂದ ದೇರಾಜೆ ಸ್ವಾಗತಿಸಿ, ಲೋಹಿತ್ ಮೇಲಡ್ತಲೆ ವಂದಿಸಿದರು.‌

Leave a Reply

Your email address will not be published. Required fields are marked *