ವಿದ್ಯಾಸಂಸ್ಥೆಗಳಲ್ಲಿ ಪುಸ್ತಕ ಒದಲು ಸಮಯ ಮೀಸಲಿಡಬೇಕು: ಡಾ.ಶಿಶಿಲ

ತಾಲೂಕಿನ ಧಾರ್ಮಿಕ ಮತ್ತು ಲೌಕಿಕ ಸಮನ್ವಯ ಶಿಕ್ಷಣವನ್ನು ಒಂದೇ ಕ್ಯಾಂಪಸ್ ನಲ್ಲಿ ನೀಡುತ್ತಿರುವ ಅನ್ಸಾರಿಯಾ ಎಜುಕೇಷನ್ ಸೆಂಟರ್ ಇದರ ಅಧೀನದ ದಅವಾ ಕಾಲೇಜಿನಲ್ಲಿ ನೂತನ ಗ್ರಂಥಾಲಯ ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ.
ಇದಕ್ಕೆ ಬೇಕಾದ ಸುಮಾರು 50ಕ್ಕಿಂತ ಹೆಚ್ಚು ಪುಸ್ತಕಗಳನ್ನು ಹಿರಿಯ ಲೇಖಕರು, ವಿಶ್ರಾಂತ ಪ್ರಾಂಶುಪಾಲರಾದ ಡಾ| ಪ್ರಭಾಕರ್ ಶಿಶಿಲ ತಾವು ಬರೆದ ಮತ್ತು ತಮ್ಮ ಗ್ರಂಥಾಲಯದಿಂದ ಉದಾರವಾಗಿ ಸಂಸ್ಥೆಗೆ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಲು ಅವರು ತಮ್ಮ ವಿದ್ಯಾರ್ಥಿ ಜೀವನದ ಅನುಭವಗಳನ್ನು ಹಂಚಿಕೊಂಡರು. ಸಂಸ್ಥೆಯ ಕಾರ್ಯದರ್ಶಿ ಶರೀಫ್ ಜಟ್ಟಿಪ್ಪಳ್ಳ, ವ್ಯವಸ್ಥಾಪಕರಾದ ಮುಹಮ್ಮದ್ ಉವೈಸ್ , ಅಧ್ಯಾಪಕರಾದ ನೌಶಾದ್ ಮದನಿ, ಸಯ್ಯಿದ್ ಹುಸೈನ್ ಪಾಶಾ ಸಅದಿ , ಹಾಫಿಝ್ ಹಾಮಿದ್ ಹಿಮಮಿ ಜತೆಗಿದ್ದರು

Leave a Reply

Your email address will not be published. Required fields are marked *