ಸುಳ್ಯ ಗಾಂಧಿನಗರ ಅಕ್ಟೋಬರ್ 1:
ಸರಿಸುಮಾರು 30 ವರ್ಷಗಳ ಹಿಂದೆ ಸುಳ್ಯದಲ್ಲಿ ಸ್ಥಾಪಿತಗೊಂಡಂತಹ ದುಲ್ಫುಕಾರ್ ಧಫ್ ಅಸೋಸಿಯೇಷನ್(ರಿ.) ಹಲವಾರು ಧಾರ್ಮಿಕ, ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಮಾನಸದಲ್ಲಿ ಅಚ್ಚಳಿಯದೆ ಉಳಿದ ಹೆಸರಾಗಿದೆ. ಕಾರಣಾಂತರದಿಂದ ಕಳೆದ ಕೆಲ ವರ್ಷಗಳಿಂದ ಸ್ಥಗಿತ ಗೊಂಡಿದ್ದ ಈ ಸಂಘದ ಚಟುವಟಿಕೆಗಳನ್ನು ಮತ್ತೆ ಸಕ್ರಿಯಗೊಳಿಸಲು ಸಂಘವನ್ನು ಪುನರ್ ಸಂಘಟಿಸಲ್ಪಟ್ಟು ಸಂಘದ ಮಾಜಿ ಅಧ್ಯಕ್ಷರಾದ ಹನಿಫ ಬಿ. ಎಂ. ಇವರ ಅಧ್ಯಕ್ಷತೆಯಲ್ಲಿ ಸುಳ್ಯದ ಅನ್ಸಾರ್ ಸಭಾಭವನದಲ್ಲಿ ಸಭೆ ಸೇರಿ ಈ ಕೆಳಗಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


ಅಧ್ಯಕ್ಷರಾಗಿ ಸಿದ್ದೀಕ್ ಕೊಡಿಯಮ್ಮೆ, ಪ್ರಧಾನ ಕಾರ್ಯದರ್ಶಿಯಾಗಿ ಹನೀಫ್ ನ್ಯಾಷನಲ್, ಕೋಶಾಧಿಕಾರಿಯಾಗಿ ಅಬ್ದುಲ್ ಕಲಾಂ ಸುಳ್ಯ,
ದಫ್ ತರಬೇತುದಾರರಾಗಿ ಅಬೂಬಕ್ಕರ್ ಸಂಭ್ರಮ, ಮತ್ತು ಸಿದ್ದೀಕ್ ಶುಕ್ರಿಯ, ಸರ್ವಾನುಮತದಿಂದ ಆಯ್ಕೆಯಾದರು.
ಈ ಸಭೆಯಲ್ಲಿ ದುಲ್ಫುಕರ್ ನ ಮಾಜಿ ಅಧ್ಯಕ್ಷರಾದ, ಸಿದ್ದೀಕ್ ಕಟ್ಟೆಕ್ಕಾರ್, ಅಶ್ರಫ್ ನಾವೂರು, ಸಂಘದ ಸ್ಥಾಪಕ ಸದಸ್ಯರಾದ ಶರೀಫ್ ಫ್ರೂಟ್,
ಮುಸ್ತಫ ನಾವೂರು, ಬಶೀರ್ ವೆಜ್, ಹಾಗೂ ಸುಮಾರು 20ರಷ್ಟು ಸ್ಥಾಪಕ ನಿರ್ದೇಶಕರುಗಳು ಸದಸ್ಯರುಗಳು ಈ ಸಭೆಯಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *