ಕನ್ನಡದ ಮೊದಲ ಉಪಗ್ರಹ ವಾಹಿನಿ ಉದಯ ಟಿವಿಯ ಅಧ್ಯಕ್ಷರು, ಹಲವು ಕನ್ನಡ ಸಿನಿಮಾಗಳ ನಿರ್ಮಾಪಕರಾಗಿದ್ದಂತ ಸೆಲ್ವಂ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಮೂಲಕ ಉದಯ ಟಿವಿಯ ಅಧ್ಯಕ್ಷ ಸೆಲ್ವಂ(84) ಇನ್ನಿಲ್ಲವಾಗಿದ್ದಾರೆ. ಹಲವು ಕನ್ನಡ ಸಿನಿಮಾಗಳ ನಿರ್ಮಾಪಕರಾಗಿ, ಕನ್ನಡದ ಮೊಟ್ಟ ಮೊದಲ ಉಪಗ್ರಹ ವಾಹಿನಿ ಉದಯ ಟಿವಿ ಅಧ್ಯಕ್ಷರಾಗಿದ್ದಂತವರು ಸೆಲ್ವಂ ಇಂದು ಬೆಳಿಗ್ಗೆ ಹೃದಯಾಘಾತಕ್ಕೆ ಒಳಗಾಗಿದ್ದರು.

ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಲಾಯಿತು. ಆದರೇ ಚಿಕಿತ್ಸೆ ಫಲಿಸದೇ ಸೆಲ್ವಂ ನಿಧನರಾಗಿರುವುದಾಗಿ ತಿಳಿದು ಬಂದಿದೆ. ಕನ್ನಡಮ್ಮನ ಸೇವೆ ಮಾಡುತ್ತಾರೆ ನನ್ನಂತಹ ನೂರಾರು ಮಂದಿಗೆ ಅನ್ನದಾತರಾಗಿದ್ದ ಸೆಲ್ವಂ ಸರ್ ಇನ್ನಿಲ್ಲವಾಗಿದ್ದಾರೆ.

ಮಾತೃಭಾಷೆ ಎಂದಕೂಡಲೇ ಅದೇನದು ಮಾತೃಭಾಷೆ.. ತಾಯ್ನುಡಿ ಎಂದು ನಮ್ಮನ್ನು ತಿದ್ದುವ ಮೇಷ್ಟ್ರಾಗಿದ್ದಂತವರು ಸೆಲ್ವಂ. ಟೀವಿ ಪರದೆಯ ಬಣ್ಣಗಳ ವೈವಿಧ್ಯಮಯ ಚಿತ್ತಾರವನ್ನು ವಿವರಿಸುವ ತಂತ್ರಜ್ಞ, ವೀಕ್ಷಕರು ನಾಡಿಮಿಡಿತ ಹೇಗಿರುತ್ತದೆ ಎಂದು ತಿಳಿ ಹೇಳುವ ವ್ಯವಹಾರ ಜ್ಞಾನಿಯಾಗಿದ್ದರು.

ಯಾವ ಸುದ್ದಿ ಎಷ್ಟು ಮುಖ್ಯ ಅದಕ್ಕೆ ಯಾವ ಪ್ರಾಧಾನ್ಯತೆ ಕೊಡಬೇಕೆಂದು ಹೇಳುತ್ತಿದ್ದ ಪತ್ರಕರ್ತ, ತಮಿಳಿನ ಮುರಸೋಳಿ, ದಿನಕರನ್ ಪತ್ರಿಕೆ ಸಂಪಾದಕರಾಗಿ ಪ್ರತಿನಿತ್ಯ ಒಳನೋಟದ ಸಂಪಾದಕೀಯ ಬರೆಯುತ್ತಿದ್ದ ವಿಮರ್ಶಕರಾಗಿದ್ದವರು. ತಿರುವಳ್ಳುವರ್ ಮತ್ತು ಸರ್ವಜ್ಞರ ಕುರಿತು ಅಪಾರ ತಿಳುವಳಿಕೆ ಹೊಂದಿದ್ದ ಪಂಡಿತ ಎಲ್ಲಕ್ಕಿಂತ ಹೆಚ್ಚಾಗಿ ಸಮಯಕ್ಕೆ ಸರಿಯಾಗಿ ಊಟ ಮಾಡುವಂತೆ ಹೇಳುತ್ತಾ ತಮ್ಮ ಸಂಸ್ಥೆಯ ಉದ್ಯೋಗಿಗಳ ಜೊತೆ ಕುಳಿತು ಊಟ ಮಾಡುತ್ತಿದ್ದ ಮಾನವತಾವಾದಿ ಸೆಲ್ವಂ ಆಗಿದ್ದರು.

ಅಂದಹಾಗೇ, 1994ರ ಜೂನ್‌ನಲ್ಲಿ ಉದಯ ಟಿವಿ ಸ್ಥಾಪನೆಯಾಗಿತ್ತು. ತಮಿಳುನಾಡಿನ ಚೆನ್ನೈನಲ್ಲಿ ಇದು ಪ್ರಸಾರ ಆರಂಭಿಸಿತ್ತು. ಇದನ್ನು ಸನ್ ಟಿವಿಯ ಅಧ್ಯಕ್ಷರಾದ ಕಲಾನಿಧಿ ಮಾರನ್ ಪ್ರಾರಂಭಿಸಿದರು. ಇದು ಕನ್ನಡದಲ್ಲಿ ಪ್ರಸಾರ ಆರಂಭಿಸಿದ ಮೊದಲ ಉಪಗ್ರಹ ವಾಹಿನಿ ಎಂಬ ಹೆಗ್ಗಳಿಕೆ ಹೊಂದಿದೆ. ವೇಗವಾಗಿ ಬೆಳೆದ ಉದುಯ, 2000ರ ಮೇ ಹೊತ್ತಿಗೆ ಕರ್ನಾಟಕದ ಟಿವಿ ವಲಯದ 70% ಆದಾಯ ಹೊಂದಿತ್ತು. 2001ರಲ್ಲಿ ಅತ್ಯುತ್ತಮ ಕನ್ನಡ ಟಿವಿ ಚಾನೆಲ್‌ ಎಂದು ಇಂಡಿಯನ್ ಟೆಲಿವಿಷನ್ ಅಕಾಡೆಮಿಯ ಪ್ರಶಸ್ತಿಯನ್ನು ಗೆದ್ದುಕೊಂಡಿತು. 2004ರವರೆಗೆ ಇದು ಉಚಿತ ಪ್ರಸಾರದ ಚಾನಲ್ ಆಗಿತ್ತು. ನಂತರ ಪಾವತಿ ಚಾನೆಲ್ ಆಗಿ ಮಾಡಲಾಯಿತು. ಇಂತಹ ಉದಯ ಟಿವಿ ಅಧ್ಯಕ್ಷರಾಗಿದ್ದಂತ ಸೆಲ್ವಂ ಅವರು ಇನ್ನಿಲ್ಲವಾಗಿದ್ದಾರೆ.

ಅವರಿಂದ ಉದ್ಯೋಗಿಗಳು ಕಲಿತದ್ದು ಅಪಾರ. ಇಂತಹ ಅವರ ನಿಧನಕ್ಕೆ ಸನ್ ನೆಟ್ವರ್ಕ್ ಸಮೂಹ, ಉದಯ ಟಿವಿಯ ಉದ್ಯೋಗಿಗಳು ಕಂಬನಿ ಮಿಡಿದ್ದಾರೆ. ಅವರ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಿಸಿದ್ದಾರೆ.

Leave a Reply

Your email address will not be published. Required fields are marked *