ಮಂಡ್ಯದಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸುಳ್ಯದ ಶ್ರೀರಾಂ ಪೇಟೆಯಲ್ಲಿ ಸಿದ್ದಿವಿನಾಯಕ ಸೂಪರ್ ಬಜಾರ್ ಮುಂಭಾಗದಲ್ಲಿ ರಕ್ಷಣಾ ಬೇಲಿಗೆ ಗುದ್ದಿ ಅಪಘಾತಕ್ಕೀಡಾದ ಘಟನೆ ಇಂದು ಮುಂಜಾನೆ 5:00 ಗಂಟೆ ಗೆ (ಅ.11) ಸಂಭವಿಸಿದೆ ಎಂದು ತಿಳಿದು ಬಂದಿದೆ ಅಪಘಾತದ ರಭಸಕ್ಕೆ ಕಾರಿನ ಏರ್‌ಬ್ಯಾಗ್ ಓಪನ್ ಆಗಿದ್ದು, ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಕಾರಿನಲ್ಲಿದ್ದವರು ಗಾಯಗೊಂಡಿದ್ದು, ಈ ದುಬಾರಿ ಬೆಲೆಯ ಹೊಸ ಕಾರು ಕಳೆದ ಮೂರು ತಿಂಗಳ ಹಿಂದೆ ಖರೀದಿಸಿದ್ದು, ಬೆಂಗಳೂರಿನ ಪ್ರತಿಷ್ಠಿತ ರಾಜಕಾರಣಿಯೊಬ್ಬರ ಪುತ್ರನದ್ದು ಎಂದು ಹೇಳಲಾಗುತ್ತಿದೆ. ಆದರೆ ಇದರ ಬಗ್ಗೆ ಯಾವುದೇ ಖಚಿತ ಮಾಹಿತಿಯಿಲ್ಲ. ಪೊಲೀಸರು ಈ ವಿಚಾರವನ್ನು ಸ್ಪಷ್ಟಪಡಿಸಬೇಕಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.