ಚಾಲಕನ ನಿಯಂತ್ರಣ ತಪ್ಪಿದ ಟ್ಯಾಂಕರ್ ಒಂದು ರಾಷ್ಟ್ರೀಯ ಹೆದ್ದಾರಿ ಮದ್ಯೆ ಅಡ್ಡಲಾಗಿ ಪಲ್ಟಿಯಾದ ಘಟನೆ ಜಾಲ್ಕೂರು ಗ್ರಾಮದ ಬೈತಡ್ಕ ತಿರುವಿನಲ್ಲಿ ಅ.30ರಂದು ಸಂಭವಿಸಿದೆ.
ಮಂಗಳೂರಿನಿಂದ ಸುಳ್ಯದ ಕೆಎಸ್ಆರ್’ಟಿಸಿ ಡಿಪೊಗೆ ಡೀಸಲ್ ಹೊತ್ತೊಯ್ಯತ್ತಿದ್ದ ಟ್ಯಾಂಕರ್ ಬೈತಡ್ಕ ತಿರುವಿನಲ್ಲಿ ರಸ್ತೆ ಮಧ್ಯೆ ಪಲ್ಟಿಯಾಗಿ, ಡೀಸಲ್ ಸೋರಿಕೆಯಾಗಿದೆ. ಘಟನೆಯಿಂದ ಚಾಲಕನಿಗೆ ಗಾಯವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಡೀಸೆಲ್ ಸೋರಿಕೆಯಾಗಿದ್ದನ್ನು ಕಂಡ ಸಾರ್ವಜನಿಕರು, ಮುಂದೆ ನಡೆಯಬಹುದಾದ ಅನಾಹುತವನ್ನು ಕ್ಯಾರೇ ಅನ್ನದೆ ಕೊಡಪಾನ, ಕ್ಯಾನ್ ಬಕೆಟ್ ನಲ್ಲಿ ಡೀಸೆಲ್ ತುಂಬಿಸಿಕೊಳ್ಳುತ್ತಿದ್ದರು, ಇದನ್ನು ಕಂಡ ಪೊಲೀಸರು ತಕ್ಷಣ ಇದಕ್ಕೆ ತಡಹಿಡಿದು ಅಲ್ಲಿ ಜಮಾಯಿಸಿದ ಜನರನ್ನು ತೆರವು ಮಾಡಲಾಯಿತು. ಪೋಲಿಸರು ಹೀಗೆ ಮಾಡಿದರು ಕೆಲವು ಮಂದಿ ಈ ಡೀಸೆಲ್ ಹರಿದು ತೋಟಕ್ಕೆ ಹೋಗುತ್ತಿದ್ದು ಅಲ್ಲಿಂದ ಡೀಸೆಲ್ ಸಂಗ್ರಹಿಸುತ್ತಿದ್ದು ವಿಪರ್ಯಸವೇ ಸರಿ. ಇನ್ನೂ ಹಲವು ಬೈಕ್ ಸವಾರರು ಜಾರಿ ಕಳಗೆ ಬಿದ್ದ ಘಟನೆಯು ನಡೆದಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳದವರು, ಸಾರ್ವಜನಿಕರು ಸೇರಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿ, ಹಲವು ಗಂಟೆಗಳ ಸತತ ಪರಿಶ್ರಮದಿಂದ ಟ್ಯಾಂಕರನ್ನು ಸುಸೂತ್ರವಾಗಿ ಎರಡು ಕ್ರೇನ್ ಮೂಲಕ ಎತ್ತಿ ಬದಿಗೆ ಸರಿಸಲಾಯಿತು. ಬಳಿಕ ಡಿಸೇಲ್ ಸೋರಿಯಾದ ಸ್ಥಳಕ್ಕೆ ಅಗ್ನಿಶಾಮಕ ದಳದವರಿಂದ ನೀರು ಸಿಂಪಡಿಸುವ ಮೂಲಕ ರಸ್ತೆ ಸಂಚಾರ ಮುಕ್ತವಾಗಿಸಲಾಯಿತು. ಸುಳ್ಯ- ಪುತ್ತೂರು ಮಾಗರ್ವಾಗಿ ಚಲಿಸುವವರು ಆದಷ್ಟು ಜಾಗರೂಕತೆಯಿಂದ ಚಲಿಸಬೇಕಾಗಿದೆ.