ಮುಂಬೈ ನವೆಂಬರ್ 08: ಕನ್ನಡಿಗ ಮಂಗಳೂರು ಮೂಲದ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ದಂಪತಿಗಳು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಬಾಲಿವುಡ್ ನಟ ಸುನಿಲ್ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ 2025ರಲ್ಲಿ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಆಸೀಸ್ ಪ್ರವಾಸಕ್ಕೂ ಮುನ್ನ ತಂದೆಯಾದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈ ನಡುವೆ ಕೆಎಲ್ ರಾಹುಲ್ ಕ್ರಿಕೆಟ್ ಕೆರಿಯರ್ ಗ್ರಾಫ್ ಕೆಳಗೆ ಇಳಿಯುತ್ತಿದ್ದು, ಇತ್ತೀಚಿನ ಇನ್ನಿಂಗ್ಸ್ ಗಳಲ್ಲಿ ಕಳಪೆ ಫಾರ್ಮ್ ನಲ್ಲಿದ್ದಾರೆ. ಅವಕಾಶಗಳ ಮೇಲೆ ಅವಕಾಶಗಳು ಸಿಗುತ್ತಿದ್ದರೂ ಅದನ್ನು ಬಳಸಿಕೊಳ್ಳಲು ಎಡವುತ್ತಿರುವ ರಾಹುಲ್ ಮೇಲೆ ನಿರಂತರವಾಗಿ ಪ್ರಶ್ನೆಗಳು ಏಳುತ್ತಿವೆ. ಹೀಗಾಗಿ ರಾಹುಲ್ ಮೇಲು ಪಂದ್ಯದಿಂದ ಪಂದ್ಯಕ್ಕೆ ಒತ್ತಡ ಹೆಚ್ಚಾಗುತ್ತಿದೆ. ಇದೀಗ ಇಷ್ಟೆಲ್ಲಾ ಟೀಕೆಗಳು ಹಾಗೂ ಒತ್ತಡದ ನಡುವೆ ಕೆಎಲ್ ರಾಹುಲ್ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ಕೆಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ದಂಪತಿಗಳು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, 2025ರಲ್ಲಿ ಮನೆಗೆ ಪುಟ್ಟ ಅತಿಥಿಯ ಆಗಮನವಾಗಲಿದೆ.

Leave a Reply

Your email address will not be published. Required fields are marked *