ಪೆರಾಜೆಯ ಕಲ್ಚರ್ಪೆ ಬಳಿ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿ ಮಧ್ಯೆ ಮರವೊಂದು ಬಿದ್ದಿದೆ. ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ ಎಂದು ತಿಳಿದು ಬಂದಿದೆ. ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದೆ.
ಇದರಿಂದಾಗಿ ದೂರದ ಊರಿಗೆ ಹೋಗುವವರಿಗೆ ಅಡಚಣೆ ಆಗಿದೆ. ಸದ್ಯ ಹೊರಗೆ ಮಳೆ ಕೂಡ ಸುರಿಯುತ್ತಿದ್ದು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.