ಸಮಾಜ ಸೇವಕರಾದ ಡಾ ಬಶೀರ್ ಆರ್ ಬಿ ಅವರಿಗೆ ಜಿಲ್ಲಾ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಪೈಚಾರ್ ಅಧ್ಯಕ್ಷ ಡಾ ಬಶೀರ್ ಆರ್‌ಬಿ ಯವರು ಪೈಚಾರ್ ನಿವಾಸಿಯಾಗಿದ್ದು ಹಲವಾರು ವರ್ಷಗಳಿಂದ ಸಮಾಜ ಸೇವೆಯನ್ನು ಮಾಡಿಕೊಂಡು ಬಂದಿದ್ದು ಧಾರ್ಮಿಕ, ರಾಜಕೀಯ, ಕ್ರೀಡಾ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು
ಪೈಚಾರ್ ಭಾಗದ ಯುವಕರ ತಂಡದ ನಾಯಕನಾಗಿ ಬೆಳೆದು ಬಂದು ಇವರು ತಮ್ಮ ಸ್ನೇಹಿತರ ತಂಡವನ್ನು ರಚಿಸಿಕೊಂಡು ಪೈಚಾರು ಭಾಗದಲ್ಲಿ ಹಲವಾರು ಸಂಘ ರಚಿಸಿಕೊಂಡು ಸಮಾಜದಲ್ಲಿ ನೊಂದವರ ಮತ್ತು ನಿರಾಶ್ರಿತರ ಬಡರೋಗಿಗಳ ಸೇವೆಯನ್ನು ಮಾಡಿಕೊಂಡು ಬಂದಿದ್ದು 24×7 ಎಂಬ ಹೆಸರನ್ನು ಸಂಪಾದಿಸುತ್ತಾರೆ.
ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ನ ಸ್ಥಾಪಕ ಅಧ್ಯಕ್ಷರಾಗಿ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಮಾಜಿ ಕೋಶಾಧಿಕಾರಿಯಾಗಿ ಹಾಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಸುಳ್ಯ ಪೈಚಾರ್ ಮುಳುಗು ತಜ್ಞರ ತಂಡದ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ. ಸುಳ್ಯ ಪರಿಸರದ ಯಾವುದೇ ಭಾಗದಲ್ಲಿ ವಾಹನ ಅಪಘಾತಗಳು, ಅನಾಹುತಗಳು ಸಂಭವಿಸಿದರೆ ತಮ್ಮ ತಂಡದ ಸದಸ್ಯರೊಂದಿಗೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ಮುಂದಾಗುತ್ತಾರೆ. ಇವರ ಸೇವೆಯನ್ನು ಗುರುತಿಸಿ ಏಷ್ಯನ್ ವೇದಿಕ್ ಕಲ್ಚರಲ್ ರಿಸರ್ಚ್ ಯುನಿವರ್ಸಿಟಿ ಅವರಿಂದ ಡಾಕ್ಟರೇಟ್ ಅವಾರ್ಡ್ ಅನ್ನು ಪಡೆದುಕೊಂಡಿದ್ದು ಹಾಗೂ 2017ನೇ ವರ್ಷದ ಕರ್ನಾಟಕ ರಾಜ್ಯ ಸರ್ಕಾರದ ಗಣರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿರುತ್ತಾರೆ. ಅದೇ ರೀತಿ ವಿವಿಧ ಸಂಘ ಸಂಸ್ಥೆಗಳು ಇವರನ್ನು ಗೌರವಿಸಿ ಸನ್ಮಾನಿಸಿರುತ್ತಾರೆ.

ಉತ್ತಮ ಕ್ರೀಡ ಪ್ರೋತ್ಸಾಹಕರಾಗಿ ಗುರುತಿಸಿಕೊಂಡಿರುವ ಇವರು ತಮ್ಮ ಸೇವೆಯನ್ನು ನೀಡುತ್ತಾ ಬೆಳೆದು ಉತ್ತಮ ಹೋರಾಟಗಾರನಾಗಿ ಗುರುತಿಸಿಕೊಂಡಿದ್ದಾರೆ ಇವರ ಸೇವೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾ ಸೇವಾ ರತ್ನ ಪ್ರಶಸ್ತಿ ಮಂಗಳೂರು ಅತ್ತಾವರದಲ್ಲಿರುವ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು ನವಂಬರ್ 25ರಂದು ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಹಾಗೂ ಆಕ್ಸಿಸ್ ಬ್ಯಾಂಕ್ ಸಹಯೋಗದಲ್ಲಿ ಈ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *