ಸುಳ್ಯ: ನ.24:- SDPI ಸುಳ್ಯ ಬ್ಲಾಕ್ ಸಮಿತಿಯ ವತಿಯಿಂದ ಸುಳ್ಯದ ಬೋರುಗುಡ್ಡೆ ವಾರ್ಡಿನ ನಾವೂರು-ಜಟ್ಟಿಪಳ್ಳ, ಅನ್ಸಾರಿಯ ರಸ್ತೆಯಲ್ಲಿ ಶ್ರಮದಾನದ ಮೂಲಕ ರಸ್ತೆಯ ಅಕ್ಕಪಕ್ಕದಲ್ಲಿ ಬೆಳೆದಂತಹ ಗಿಡಗಂಟಿಗಳನ್ನು ತೆರವುಗೊಳಿಸುವುದರ ಮೂಲಕ ಸ್ವಚ್ಚತಾ ಕಾರ್ಯಕ್ರಮವು ನಡೆಯಿತು.

ನವಂಬರ್ 29 ರಂದು ನಡೆಯಲಿರುವ ಅನ್ಸಾರಿಯ ಗಲ್ಫ್ ಆಡಿಟೋರಿಯಂನ ಅದ್ದೂರಿಯ ಉದ್ಘಾಟನಾ ಸಮಾರಂಭದ ಪೂರ್ವಭಾವಿಯಾಗಿ ಎಸ್‌ಡಿಪಿಐಯ ಸುಳ್ಯ ಬ್ಲಾಕ್ ಸಮಿತಿಯ ಅಝೀಝ್ ಕಚ್ಚು ರವರ ನೇತೃತ್ವದಲ್ಲಿ ಶ್ರಮದಾನವು ನಡೆಯಿತು.

ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತಪಡಿಸಿ ಶ್ರಮದಾನದಲ್ಲಿ ಭಾಗವಹಿಸಿದ ಕಾರ್ಯಕರ್ತರಿಗೆ ಉಪಹಾರ, ತಂಪು ಪಾನೀಯ ನೀಡಲಾಯಿತು.

ಈ ಸಂದರ್ಭದಲ್ಲಿ ಸುಳ್ಯ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ಅಬ್ದುಲ್ ಕಲಾಂ, ಕಾರ್ಯದರ್ಶಿ ಸಿದ್ದೀಕ್ ಕೊಡಿಯಮ್ಮೆ, ಸದಸ್ಯರಾದ ಅಶ್ರಫ್ ಟರ್ಲಿ, ಸುಳ್ಯ ಬ್ಲಾಕ್ ಸಮಿತಿಯ ಅಧ್ಯಕ್ಷರಾದ ಮೀರಝ್ ಸುಳ್ಯ, ಉಪಾಧ್ಯಕ್ಷರಾದ ಸಲೀಂ ಗೂನಡ್ಕ, ಕಾರ್ಯದರ್ಶಿ ಸುಹೈಲ್ ಸುಳ್ಯ ಸಹಿತ ಸುಳ್ಯ ಬ್ಲಾಕ್ ವ್ಯಾಪ್ತಿಯ ಬ್ರಾಂಚ್ ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಲಘು ಉಪಹಾರವನ್ನು ಆಯೋಜಿಸಲಾಗಿತ್ತು. ಅಶ್ರಫ್ ಟರ್ಲಿಯವರು ಕಾರ್ಯಕ್ರಮವನ್ನು ನಿರೂಪಿಸಿ ಎಲ್ಲರಿಗೂ ಧನ್ಯವಾದಗೈದರು.

Leave a Reply

Your email address will not be published. Required fields are marked *