ಜೆ.ಬಿ ಯುನೈಟೆಡ್ ಫುಟ್ಬಾಲ್ ಕ್ಲಬ್ ಇದರ 9ನೇ ವರ್ಷದ ವಾರ್ಷಿಕ ಮಹಾಸಭೆಯು ನವೆಂಬರ್ 23 ರಂದು ಇಂಡಿಯನ್ ರೆಸಿಡೆನ್ಸಿಯಲ್ಲಿ ನಡೆಸಲಾಯಿತು. ನೂತನ ಪದಾಧಿಕರಿಗಳ ಆಯ್ಕೆ ಪ್ರಕ್ರಿಯೆ ಹಾಗೂ ತಂಡದ ಹಾಗೂ ಹೋಗುಗಳ ಕುರಿತು ಚರ್ಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಹನೀಫ್ ಎಕೆಬಿ, ಉಪಾಧ್ಯಕ್ಷರಾಗಿ ಶಂಸುದ್ದೀನ್ (ಮೊಬೈಲ್), ಕಾರ್ಯದರ್ಶಿಯಾಗಿ ಅಝೀಝ್ ಸಂಗಮ್, ಜೊತೆ ಕಾರ್ಯದರ್ಶಿಯಾಗಿ ಯಾಹ್ಯ ವೆಜ್, ಕೋಶಾಧಿಕಾರಿಯಾಗಿ ಸುಹೈಲ್ ಸುಳ್ಯ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. 2025 ರಲ್ಲಿ ಈ ಕ್ಲಬ್ ಗೆ ದಶಮಾನೋತ್ಸವ ಆಚರಿಸಲಿದ್ದು, ಇದರ ಅಂಗವಾಗಿ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಕೂಟ ಆಯೋಜಿಸುವುದಾಗಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಕಾರ್ಯಕಾರಿ ಸಮೀತಿ ಸದಸ್ಯರಾದಂತಹ ಇಕ್ಬಾಲ್ ಗಾಂಧಿನಗರ, ರಂಶಾದ್ ಅಂಚು, ಶಮೀರ್ ಪ್ರಗತಿ, ನಾಸಿರ್ ಬಾರಿಕ್ಕಾಡ್ ಹಾಗೂ ತಂಡದ ಆಟಗಾರರು ಉಪಸ್ಥಿತರಿದ್ದರು. ಸಲ್ಮಾನ್ ಫಾರಿಸ್ ಕಾರ್ಯಕ್ರಮವನ್ನು ನಿರೂಪಿಸಿದರು.