ಪೈಚಾರ್ ಅಲ್ ಅಮೀನ್ ಯೂತ್ ಸೆಂಟರ್ ಇದರ 18 ನೇ ವಾರ್ಷಿಕ ಸ್ವಲಾತ್ ಕಾರ್ಯಕ್ರಮದ ಅಂಗವಾಗಿ ರಾಜ್ಯ ಮಟ್ಟದ ದಫ್ ಸ್ಪರ್ಧೆ ಕಾರ್ಯಕ್ರಮ ಮತ್ತು ನೂತನ ಕಚೇರಿ ಉದ್ಘಾಟನೆ ಹಾಗೂ ವಾರ್ಷಿಕ ಸ್ವಲಾತ್ ಕಾರ್ಯಕ್ರಮವು ದಿನಾಂಕ ನ. 24 ಹಾಗೂ 25 ರಂದು ಪೈಚಾರಿನ ಖುವ್ವತುಲ್ ಇಸ್ಲಾಂ ಮದರಸದ ವಠಾರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ದಶಕಗಳ ಸುಳ್ಯ ತಾಲೂಕಿನ ಓರ್ವ ಹಿರಿಯ ಪತ್ರಕರ್ತ ಹಸೈನಾರ್ ಜಯನಗರ, ಇವರ ವೃತ್ತಿ ಜೀವನದ ಸಾಧನೆಯನ್ನು ಮನಗಂಡು ಅಲ್-ಅಮೀನ್ ಯೂತ್ ಸೆಂಟರ್ ಪೈಚಾರ್ ವತಿಯಿಂದ ಇವರಿಗೆ ಸನ್ಮಾನಿಸಲಾಯಿತು.