ಸುಳ್ಯ ನಗರದಾದ್ಯಂತ ಕೆಲ ದಿನಗಳಿಂದೀಚೆಗೆ ಕಳ್ಳರ ಹಾವಳಿ ಹೆಚ್ಚಾಗಿದ್ದು, ಹಣ, ಅತ್ಯಗತ್ಯ ಅಮೂಲ್ಯ ವಸ್ತುಗಳನ್ನು ಕೊಂಡೊಯ್ಯುತ್ತಿದ್ದಾರೆ. ಇದರ ಎಲ್ಲಾ ಸಿಸಿ ಟಿವಿ ದೃಶ್ಯಾವಳಿಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪೈಚಾರ್, ಸುಳ್ಯ, ಬೆಳ್ಳಾರೆ ಹೀಗೆ ಹಲವು ಪ್ರದೇಶದಲ್ಲಿ ಇತ್ತೀಚೆಗಷ್ಟೇ ಕಳ್ಳತನವಾಗಿದ್ದು, ಇದೀಗ ಪೈಚಾರಿನ ನಾಗರೀಕರು ಸುಳ್ಯ ಠಾಣೆಗೆ ಭೇಟಿ ನೀಡಿ ಕಳ್ಳರ ಹಾವಳಿಯನ್ನು ತಡೆಯಲು ಮನವಿಯನ್ನು ಸಲ್ಲಿಸಿದ್ದಾರೆ. ಮನವಿ ಸ್ವೀಕರಿಸಿದ ಎಸ್. ಸಂತೋಷ್ ಬಿ.ಪಿ ಯವರು ಮಾತನಾಡಿ ಈ ಬಗ್ಗೆ ಕಾರ್ಯಚರಣೆ ನಡೆಸಿ ಕಳ್ಳತನ ಮಾಡಿದವರನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.