ಫಂಗಲ್ ಚಂಡಮಾರುತದ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಮತ್ತು ಶಾಲಾ ಕಾಲೇಜುಗಳಿಗೆ  ದಿನಾಂಕ:03.12.2024 (ಮಂಗಳವಾರ) ರಂದು ಒಂದು ದಿವಸದ ರಜೆಯನ್ನು ಘೋಷಿಸಿದೆ.

ಇದೀಗ ಸುಳ್ಯ ಪಟ್ಟಣ ಪಂಚಾಯತ್ ಪ್ರಕಟಣೆಯೊಂದನ್ನು ಹೊರಡಿಸಿದೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಂಜ್ ಅಲೆರ್ಟ್ ಘೋಷಣೆಯಾಗಿರುವುದರಿಂದ ಮುಂದಿನ ಎರಡು ಮೂರು ದಿನಗಳಲ್ಲಿ ಮಳೆಯಾಗಲಿರುವುದರಿಂದ ಹೊಳೆ ಬದಿಗೆ ಯಾರು ಕೂಡ ತೆರಳದಂತೆ ಸೂಚಿಸಲಾಗಿದೆ, ಮತ್ತು ಬರೆಬದಿಯಲ್ಲಿ ಹೊಳೆ ಬದಿಯಲ್ಲಿ, ಮನೆ ಇರುವವರು ಜಾಗರೂಕರಾಗಿರಬೇಕೆಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *