ಸುಳ್ಯ: ಪುತ್ತೂರು ಮೂಲದ ಯುವಕ ಸಿನಾನ್, ಮೂಲತಃ ಪತ್ತೂರಿನ ಯುವಕ, ಸಾಮಾಜಿಕ ಜಾಲತಾಣದಲ್ಲಿ ಈತನ ಹೆಸರು ಕೇಳದವರು ಬಹಳ ವಿರಳ, ಭಾರತದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಜಗತ್ತಿನಾದ್ಯಂತ ಭಾರತದ ಮಹೀಂದ್ರಾ ಕಂಪನಿಯ ಸ್ಕಾರ್ಪಿಯೋ ಕಾರು ಮೂಲಕ ಪರ್ಯಟನೆಗೊಳಿಸಿ ಇದೀಗ ತವರೂರಿಗೆ ಬಂದಿಳಿದಿದ್ದಾನೆ.
ಸುಮಾರು ಎರಡು ವರ್ಷಗಳ ವರೆಗೆ ಒಟ್ಟು 67 ಕ್ಕೂ ಹೆಚ್ಚು ದೇಶಗಳನ್ನು ಸುತ್ತಿ ಸರಿ ಸುಮಾರು 1 ಲಕ್ಷ ಕಿ.ಮೀ ಗೂ ಹೆಚ್ಚು ಸ್ಥಳವನ್ನು ಸುತ್ತಿದ್ದಾನೆ. ಭಾರತದ ಹಾಗೂ ಕನ್ನಡದ ಕಂಪನ್ನು ವಿಶ್ವದೆಲ್ಲೆಡೆ ಪಸರಿಸಿದ್ದಾನೆ ಈ ಕುವರ,
ತವರೂರು ಪುತ್ತೂರಿಗೆ ಬರುವ ಸಲುವಾಗಿ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೂ ಈತ ಭೇಟಿ ನೀಡಿ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯಕ್ಕೆ ಆಗಮಿಸಿದ್ದು,
ಈ ಸಂದರ್ಭದಲ್ಲಿ ಸುಳ್ಯದ ಗ್ರ್ಯಾಂಡ್ ವ್ಹೀಲ್ ನಲ್ಲಿ ಗ್ರ್ಯಾಂಡ್ ವೆಲ್ಕಮ್ ಮಾಡಲಾಯಿತು.
ಈ ಸಂಧರ್ಭದಲ್ಲಿ ಗ್ರ್ಯಾಂಡ್ ವ್ಹೀಲ್ ಮಾಲಿಕ ನಿಝಾರ್, ಹುಸ್ನಿ ಮುಬಾರಕ್, ನಝೀರ್ ಶಾಂತಿನಗರ, ಸತ್ತಾರ್ ಪೈಚಾರ್, ಇಬ್ರಾಹಿಂ, ಹಸೈನಾರ್ ಜಯನಗರ, ಶಿಫಾಝ್, ಶಹದ್, ವಿನಯ, ರಾಕೇಶ್, ಸಮದ್ ಮತ್ತಿತ್ತರು ಉಪಸ್ಥಿತರಿದ್ದರು.