ಸುಳ್ಯ: ಸುಳ್ಯದ ನಗರ ವ್ಯಾಪ್ತಿಯಲ್ಲಿನ ಪ್ರಸ್ತುತ ಹಲವು ಸಮಸ್ಯೆಗಳ ಕುರಿತು ಡಿ.4 ರಂದು ಅಸ್ತ್ರ ಸ್ಪೋರ್ಟ್ಸ್ (ರಿ)ಪೈಚಾರ್ ಸಂಘಟನೆಯು ನಗರ ಪಂಚಾಯತ್ ಮುಖ್ಯಾಧಿಕಾರಿಗೆ ಮನವಿ ನೀಡಲಾಯಿತು.
ನಗರ ಪಂಚಾಯತ್ ವ್ಯಾಪ್ತಿಯ ಪೈಚಾರಿನಿಂದ ಸುಳ್ಯ ನಗರ ಪ್ರವೇಶ ಮಾಡುವ ರಸ್ತೆಯಲ್ಲಿ ಒಂದೇ ಒಂದು ಬೀದಿ ದೀಪ ಇಲ್ಲದೆ ಕತ್ತಲೆಯಿಂದ ನಗರಕ್ಕೆ ಸ್ವಾಗತ ಕೋರುತ್ತಾ ಇದೆ.
ಪೈಚಾರಿನಿಂದ ಸುಳ್ಯದವರಗೆ ಬೀದಿ ದೀಪ ಅಳವಡಿಸಬೇಕಾಗಿ ಹಾಗೂ ಶಾಂತಿನಗರ ತಿರುವಿನಲ್ಲಿರುವ ಹೈ ಮಾಸ್ ದೀಪವನ್ನು ದುರಸ್ತಿಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಬರುವ ಹಾಗೆ ಆದಷ್ಟೂ ಬೇಗ ಕ್ರಮ ವಹಿಸಬೇಕಾಗಿ ಹಾಗೂ ಶಾಂತಿನಗರದಲ್ಲಿ ಬೀದಿ ನಾಯಿಗಳ ಉಪಟಳ ಜಾಸ್ತಿಯಾಗಿದ್ದು, ಶಾಲೆಲಾ-ಕಾಲೇಜು ಹೋಗುವ ವಿದ್ಯಾರ್ಥಿಗಳಿಗೆ, ವೃದ್ಧರಿಗೆ ಹಾಗೂ ಮಹಿಳೆಯರಿಗೆ ಬಹಳ ತೊಂದರೆಯಾಗುತ್ತಿದ್ದು ಇದಕ್ಕೂ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಲು ಅಸ್ತ್ರ ಸ್ಪೋರ್ಟ್ಸ್ ಸಂಘಟನೆಯ ಮೂಲಕ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಅಸ್ತ್ರ ಸ್ಪೋರ್ಟ್ಸ್ ಕ್ಲಬ್’ನ ಅಧ್ಯಕ್ಷ ರಿಫಾಯಿ, ನಝೀರ್ ಶಾಂತಿನಗರ, ಕಾರ್ಯದರ್ಶಿ ನಾಸಿರ್ ಕೆ.ಪಿ, ಜೊತೆ ಕಾರ್ಯದರ್ಶಿ ಝುಬೈರ್.ಕೆ ಉಪಸ್ಥಿತರಿದ್ದರು.