‘ಪುಷ್ಪ 2’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ. ಮೊದಲ ದಿನವೇ ಅಧಿಕ ಗಳಿಕೆ ಮಾಡಿದೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿರುವ ಈ ಚಿತ್ರ ಕನ್ನಡದಲ್ಲೂ ಉತ್ತಮ ಪ್ರದರ್ಶನ ಕಂಡಿದೆ. ಪ್ರೀಮಿಯರ್ ಶೋಗಳಿಂದ 10 ಕೋಟಿ ರೂಪಾಯಿ ಗಳಿಕೆಯಾಗಿದೆ.

‘ಪುಷ್ಪ 2’ ಚಿತ್ರಕ್ಕೆ ಬಾಕ್ಸ್ ಆಫೀಸ್​ನಲ್ಲಿ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ಈ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್​ನಲ್ಲಿ ಹಂಗಾಮ ಸೃಷ್ಟಿ ಮಾಡಿದೆ. ಈ ಚಿತ್ರದ ಗಳಿಕೆ ಅಬ್ಬರಕ್ಕೆ ಹಲವು ಚಿತ್ರಗಳ ದಾಖಲೆಗಳು ಉಡೀಸ್ ಆಗಿವೆ. ಹಾಗಾದರೆ, ಈ ಸಿನಿಮಾ ಭಾರತದ ಬಾಕ್ಸ್ ಆಫೀಸ್​ನಲ್ಲಿ ಮಾಡಿದ ಗಳಿಕೆ ಎಷ್ಟು ಎಂಬ ವಿಚಾರಕ್ಕೆ ಈ ಸ್ಟೋರಿಯಲ್ಲಿ ಉತ್ತರ ಇದೆ.

‘ಪುಷ್ಪ 2’ ಸಿನಿಮಾ ಡಿಸೆಂಬರ್ 5ರಂದು ರಿಲೀಸ್ ಆಯಿತು. ಈ ಚಿತ್ರಕ್ಕೆ ಡಿಸೆಂಬರ್ 4ರಂದು ಹಲವು ಕಡೆಗಳಲ್ಲಿ ಪ್ರೀಮಿಯರ್ ಶೋ ಇಡಲಾಗಿತ್ತು. ಇದು ತಂಡಕ್ಕೆ ಸಹಕಾರಿ ಆಗಿದೆ. ಪ್ರೀಮೀಯರ್​ ಶೋಗಳಿಂದ ಚಿತ್ರಕ್ಕೆ 10 ಕೋಟಿ ರೂಪಾಯಿ ಹರಿದು ಬಂದಿದೆ. ಡಿಸೆಂಬರ್ 5ರಂದು ಚಿತ್ರಕ್ಕೆ 165 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಮೂಲಕ ಸಿನಿಮಾದ ಒಟ್ಟಾರೆ ಗಳಿಕೆ 175 ಕೋಟಿ ರೂಪಾಯಿ ಆಗಿದೆ. ವಿಶ್ವ ಬಾಕ್ಸ್ ಆಫೀಸ್ ಲೆಕ್ಕ ಸೇರಿದರೆ ಸಿನಿಮಾದ ಕಲೆಕ್ಷನ್ 250 ಕೋಟಿ ರೂಪಾಯಿ ಸಮೀಪಿಸಲಿದೆ.

ಹೈದರಾಬಾದ್ನಲ್ಲಿ ಚಿತ್ರಕ್ಕೆ 1549 ಶೋ ಸಿಕ್ಕಿದೆ. ಕರ್ನಾಟಕದಲ್ಲಿ ಸುಮಾರು 1072 ಶೋಗಳು ದೊರೆತಿವೆ. ಚೆನ್ನೈನಲ್ಲಿ 244 ಶೋಗಳು ಚಿತ್ರಕ್ಕೆ ದೊರೆತಿವೆ. ಈ ಸಿನಿಮಾ ತೆಲುಗು ಮಾತ್ರವಲ್ಲದೆ ಕನ್ನಡ ವರ್ಷನ್ನಲ್ಲೂ ಲಭ್ಯವಿದೆ. ಕನ್ನಡದಲ್ಲೂ ಹಲವು ಶೋಗಳು ಚಿತ್ರಕ್ಕೆ ಸಿಕ್ಕಿದ್ದು, ಇಲ್ಲಿಯೂ ಉತ್ತಮ ಗಳಿಕೆ ಆಗಿದೆ. 175 ಕೋಟಿ ರೂಪಾಯಿ ಪೈಕಿ 95.1 ಕೋಟಿ ರೂಪಾಯಿ ತೆಲುಗು ವರ್ಷನ್​ನಿಂದ, ಹಿಂದಿಯಿಂದ 67 ಕೋಟಿ ರೂಪಾಯಿ, ತಮಿಳಿನಿಂದ 7 ಕೋಟಿ ರೂಪಾಯಿ, ಮಲಯಾಳಂನಿಂದ 5 ಕೋಟಿ ರೂಪಾಯಿ ಹಾಗೂ ಕನ್ನಡ ವರ್ಷನ್​ನಿಂದ 1 ಕೋಟಿ ರೂಪಾಯಿ ಚಿತ್ರಕ್ಕೆ ಸಿಕ್ಕಿದೆ. ಸಿನಿಮಾದ ಅಬ್ಬರ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಲಿದೆ. ಚಿತ್ರವನ್ನು ನೋಡಿ ಅನೇಕರು ಮೆಚ್ಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *