ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಜಮೀಯ್ಯತುಲ್ ಫಲಾಹ್ (ರಿ)ಸುಳ್ಯ ತಾಲೂಕು ಘಟಕದ 2024/ 2025ನೇ ಸಾಲಿನ ಪ್ರತಿಭಾ ಪುರಸ್ಕಾರ ವಿದ್ಯಾರ್ಥಿ ವೇತನ ವಿತರಣೆ ಮತ್ತು ಆರೋಗ್ಯ ಮಾಹಿತಿ ಕಾರ್ಯಕ್ರಮದ ಸುಳ್ಯದ ಮುನವ್ವಿರುಲ್ ಇಸ್ಲಾಂ ಮದರಸ ಗಾಂಧಿನಗರ ದಲ್ಲಿ ಡಿ.7 ರಂದು ಶನಿವಾರ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಜಮೀಯ್ಯತುಲ್ ಫಲಾಹ್ ಘಟಕದ ಅಧ್ಯಕ್ಷ ಶಾಹಲ್ ಹಮೀದ್ ಕೆ.ಕೆ ರವರು ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಜಮೀಯ್ಯತುಲ್ ಫಲಾಹ್ ಅಧ್ಯಕ್ಷರಾದ ಕೆಎಂ ಅಬೂಬಕರ್ ಪಾರೆ ಕ್ಕಲ್ ವಹಿಸಲಿದ್ದಾರೆ. ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್ ಯು ಕೆ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಜಮೀಯ್ಯತುಲ್ ಫಲಾಹ್ ಪ್ರಧಾನ ಕಾರ್ಯದರ್ಶಿ ಶೇಖ್ ಅಬ್ದುಲ್ ಗಫೂರ್ ,ಸುಳ್ಯ ಆರೋಗ್ಯ ಅಧಿಕಾರಿ ಡಾl ನಂದಕುಮಾರ್ ,ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ ಸುಳ್ಯ ಮುಖ್ಯೋಪಾಧ್ಯಾಯ ಇಲ್ಯಾಸ್ ಅಹಮದ್ ,ಸುಳ್ಯ ಅನ್ಸಾರ್ ಮುಸ್ಲಿಮಿನ್ ಎಸೋಸಿಯೇಶನ್ ಅಧ್ಯಕ್ಷರಾದ ಅಬ್ದುಲ್ ಕಟ್ಟೆಕಾರ್ಸ್, ಜುಮ್ಮಾ ಮಸೀದಿ ಅಧ್ಯಕ್ಷರಾದ ಮೊಹಮ್ಮದ್ ಕುಂಜಿ ಬಾರ್ಪಣೆ , ಫಾರ್ಮ್ಡ್ ಗ್ರೂಪ್ ಬೆಂಗಳೂರು ಉಪಾಧ್ಯಕ್ಷರಾದ ಉಮ್ಮರ್ ಬೀಜದ ಕಟ್ಟೆ, ಹಿರಿಯ ಉದ್ಯಮಿ ಅಬ್ದುಲ್ ರಹಮಾನ್ ಸಂಕೇಶ್ ,ಎಂ. ಐ .ಎಂ. ಸಮಿತಿ ನಿರ್ದೇಶಕರಾದ ಕೆ.ಬಿ.ಮಜೀದ್ ಸೇರಿದಂತೆ ಮುಂತಾದವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.