ಸುಳ್ಯದ ಗಾಂಧಿನಗರ ಪಯಸ್ವಿನಿ ಸರ್ವಿಸ್ ಸ್ಟೇಷನ್ ಹೆಚ್.ಪಿ.ಸಿ.ಎಲ್. ಸಂಸ್ಥೆಯ ಪ್ರತಿಷ್ಟಿತ ಕ್ಲಬ್ ಹೆಚ್.ಪಿ. ಫಸ್ಟ್ ಗೆ ಆಯ್ಕೆಯಾಗಿದೆ.
ಪೆಟ್ರೋಲ್ ಪಂಪ್ ನಲ್ಲಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿರುವವರನ್ನು ಪರಿಗಣಿಸಿ ಹೆಚ್ ಪಿ. ಕ್ಲಬ್ ಫೆಸ್ಟ್ ಗೆ ಆಯ್ಕೆಮಾಡಲಾಗಿದೆ.
ಸುಳ್ಯ ಮತ್ತು ಪುತ್ತೂರು ತಾಲೂಕಿನಿಂದ ಆಯ್ಕೆಯಾದ ಮೊದಲ ಪ್ರೆಟ್ರೋಲ್ ಪಂಪ್ ಪಯಸ್ವಿನಿ ಸರ್ವಿಸ್ ಸ್ಟೇಷನ್.
ಡಿ.3ರಂದು ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಹೆಚ್.ಪಿ.ಸಿ.ಎಲ್. ನ ರೀಜನಲ್ ಮ್ಯಾನೇಜರ್ ನವೀನ್ ಕುಮಾರ್ ರವರು ಪಯಸ್ವಿನಿ ಸರ್ವಿಸ್ ಸ್ಟೇಷನ್ ನ ಪಾಲದಾರರಾದ ಅಬ್ದುಲ್ ಮುಜೀಬ್ ಹಾಗೂ ಮಹಮ್ಮದ್ ಮುಸ್ತಫರಿಗೆ ಪ್ರಮಾಣ ಪತ್ರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸೇಲ್ಸ್ ಆಫೀಸರ್ ಪ್ರದೀಪ್ ಉಪಸ್ಥಿತರಿದ್ದರು.
ಹೆಚ್ಚಿನ ಗ್ರಾಹಕ ಅನುಭವಕ್ಕಾಗಿ 𝗛𝗣 𝗥𝗲𝘁𝗮𝗶𝗹 ” 𝗖𝗟𝗨𝗕”𝗛𝗣 𝗙𝗶𝗿𝘀𝘁”ಅನ್ನು ಹೆಮ್ಮೆಪಟ್ಟು ಪರಿಚಯಿಸುತ್ತಿದೆ – ಇಲ್ಲಿ ಗ್ರಾಹಕರೇ ಮೊದಲಿಗರು. CLUB HP First ಪೆಟ್ರೋಲ್ ಬಂಕ್ಗಳಲ್ಲಿ, ಮೌಲ್ಯಯುತ ಗ್ರಾಹಕರ ಮತ್ತು ಅವರ ವಾಹನಗಳಿಗಾಗಿ ವಿಶೇಷ ಸೇವೆಗಳನ್ನು ಪಡೆಯಬಹುದು.
ಇಲ್ಲಿ ವಿಭಿನ್ನವಾಗಿಸುವುದು ಏನಂದರೆ ಗ್ರಾಹಕರು ಪ್ರತಿ ಲೀಟರ್ ಇಂಧನವನ್ನು ಖರೀದಿಸಿದಾಗ, ಒಂದು ಪೈಸೆಯನ್ನು ನೇರವಾಗಿ ಪರಿಸರ ಸಂರಕ್ಷಣೆಗೆ 𝗖𝗹𝘂𝗯 𝗛𝗣 𝗣𝗹𝗮𝗻𝗲𝘁 𝗙𝘂𝗻𝗱 ಗೆ ಕೊಡುಗೆ ನೀಡಲಾಗುತ್ತದೆ.