ಸಕಲೇಶಪುರ ಡಿಸೆಂಬರ್ 09: ಹೃದಯಾಘಾತದಿಂದ ಯುವಜನತೆ ಸಾವನಪ್ಪುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿವೆ. ಎಳೆ ವಯಸ್ಸಿನಲ್ಲೇ ಯುವಜನತೆ ಸಾವಿನ ಕದ ತಟ್ಟುತ್ತಿದ್ದಾರೆ. ಅಂತಹುದೆ ಒಂದು ಘಟನೆ ಸಕಲೇಶಪುರದ ರಾಮೇನಹಳ್ಳಿ ಗ್ರಾಮದಲ್ಲಿ ನಡೆದಿದ್ದು, 26 ವರ್ಷ ಪ್ರಾಯದ ಸಾಪ್ಟವೇರ್ ಇಂಜಿನಿಯರ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರನ್ನು ಸಮರ್ಥ್ (26) ಎಂದು ಗುರುತಿಸಲಾಗಿದೆ. ಕಾಫಿ ಬೆಳೆಗಾರ ಹೇಮಂತ್ ಹಾಗೂ ಸರಳ ಎಂಬುವವರ ಪುತ್ರ ಸಮರ್ಥ್‌ ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ಕೆಲ ತಿಂಗಳುಗಳಿಂದ ವರ್ಕ್ ಫ್ರಂ ಹೋಂ ಮಾಡುತ್ತಿದ್ದ ಸಮರ್ಥ್ ಭಾನುವಾರ ಬೆಳಗ್ಗೆಯವರೆಗೂ ಕೆಲಸ ಮಾಡಿ ಮಲಗಿದ್ದರು. ಸಂಜೆ ಮೇಲೆದ್ದು ನೀರು ಕುಡಿದ ಸಮರ್ಥ್ ತಕ್ಷಣವೇ ಮನೆಯಲ್ಲಿಯೇ ಕುಸಿದು ಬಿದ್ದಿದ್ದಾರೆ. ಕೂಡಲೇ ಸಮರ್ಥ್ ತಾಯಿ ಪತಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದು ಮನೆಗೆ ಬಂದ ವೈದ್ಯರು ಸಮರ್ಥ್ ತಪಾಸಣೆ ನಡೆಸಿದ್ದಾರೆ. ಅಷ್ಟರಲ್ಲಿ ಹೃದಯಾಘಾತದಿಂದ ಸಮರ್ಥ್ ಕೊನೆಯುಸಿರೆಳೆದಿದ್ದರು. ವಯಸ್ಸಿಗೆ ಬಂದ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

Leave a Reply

Your email address will not be published. Required fields are marked *