ಶಾಲೆಗಾಗಿ ಮಿಡಿಯಲಿ ನಮ್ಮ ಹೃದಯ ಎಂಬ ದ್ವೇಯ ದಡಿಯಲ್ಲಿ ಯಶಸ್ವಿ 91 ವರ್ಷಗಳನ್ನು ಪೂರೈಸಿದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾದಕಟ್ಟಿ ಇದರ
ಮಾದಕಟ್ಟೆ ಶಾಲಾಭಿವೃದ್ಧಿ ಸಮಿತಿ ಆಶ್ರಯದಲ್ಲಿ ಕಬಡ್ಡಿ ಪಂದ್ಯಾಟ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಡಿ. 14 ರಂದು ನಡೆಯಲಿದೆ.
ಶಾಲಾ ಮೈದಾನದಲ್ಲಿ ಸಂಜೆ 7 ಘಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು ಈ ಕಾರ್ಯಕ್ರಮಕ್ಕೆ ವಿವಿಧ ಸಾಮಾಜಿಕ, ಕ್ರೀಡಾ ಮುಖಂಡರುಗಳು ಭಾಗವಹಿಸಲಿದ್ದು ಶಿಕ್ಷಣ ಹಾಗೂ ಕ್ರೀಡಾ ಅಭಿಮಾನಿಗಳು ಮತ್ತು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಕೊಡುವಂತೆ ಸ್ನೇಹ ಮಿಲನ & ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.