ದಶಕಗಳ ಫುಟ್ಬಾಲರ್ ಮುನಾಫರ್ ರವರಿಗೆ ಸನ್ಮಾನ

ಸುಳ್ಯ ಡಿ.23: ಇಲ್ಲಿನ ಮಾರ್ಕೆಟ್ ಬಾಯ್ಸ್ ಫುಟ್ಬಾಲ್ ಕ್ಲಬ್ ವತಿಯಿಂದ ಸುಳ್ಯದ ಗಾಂಧಿನಗರ ಶಾಲಾ ಮೈದಾನದಲ್ಲಿ 18 ವರ್ಷ ವಯೋಮಿತಿಯ ಫುಟ್ಬಾಲ್ ಪಂದ್ಯಾಕೂಟವು ನಡೆಯಿತು.
ಪಂದ್ಯಕೂಟದ ಚಾಂಪಿಯನ್ ಪ್ರಶಸ್ತಿಯನ್ನು ಟೌನ್ ಟೀಮ್ ಸುಳ್ಯ ಹಾಗೂ ರನ್ನರ್ ಅಪ್ ಪ್ರಶಸ್ತಿಯನ್ನು ಜೆ. ಬಿ ಯುನೈಟೆಡ್ ತಂಡ ಮುಡಿಗೇರಿಸಿಕೊಂಡಿತು.

ಪಂದ್ಯಕೂಟದ ಸಮಾರೋಪ ಸಮಾರಂಭದಲ್ಲಿ ಸುಳ್ಯ ತಾಲೂಕಿನಲ್ಲೇ ಅತೀ ದೊಡ್ಡ ಪಂದ್ಯಾಕೂಟವನ್ನು ಆಯೋಜಿಸಿ, ಅತ್ಯುತ್ತಮ ನಿರ್ಣಾಯಕರಾಗಿ, ಕಳೆದ ದಶಕದಿಂದ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಕೂಟಕ್ಕೆ ನಿರ್ಣಾಯಕರಾಗಿಯೂ, ತಾಲುಕು ಮಟ್ಟದ ತಂಡಕ್ಕೆ ತರಬೇತುದಾರರಾಗಿಯೂ, ಪ್ರತಿಷ್ಟಿತ ಸಹರ ಯುನೈಟೆಡ್ ಫುಟ್ಬಾಲ್ ಕ್ಲಬ್ ನ ವ್ಯವಸ್ತಾಪರಾಗಿಯೂ, ಫುಟ್ಬಾಲ್ ಪೆವಿಲಿಯನ್ ಗ್ರೂಪ್ ನ ಅಡ್ಮಿನ್ ಆಗಿಯೂ ಸೇವೆ ಸಲ್ಲಿಸುತ್ತಾ, ಸುಳ್ಯದಲ್ಲಿನ ಫುಟ್ಬಾಲ್ ಬೆಳವಣಿಗೆಗೆ ನಡೆಸುತ್ತಿರುವ ಅಹರ್ನಿಶಿ ಸೇವೆಯನ್ನು ಗುರುತಿಸಿ,ಸಂಘಟನಾ ಚತುರರಾದ ಮುನಾಫರ್ MS 27 ರವರಿಗೆ ಗಣ್ಯರ ಸಮ್ಮುಖದಲ್ಲಿ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಮಿತಿ ಸದಸ್ಯರಾದ ಅಶೋಕ್ ಎಡಮಲೆ ಹಾಗೂ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ (ರಿ.) ಪೈಚಾರ್ ಇದರ ಅಧ್ಯಕ್ಷರಾದ ಬಷೀರ್ ಆರ್. ಬಿ ಕ್ರೀಡಾಪಟುಗಳಿಗೆ ಹುರಿದುಂಬಿಸುವ ಮಾತುಗಳನ್ನಾಡಿ, ಸಂಘಟಕರನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಸುಳ್ಯ ನಗರ ಪಂಚಾಯತ್ ಸದಸ್ಯರೂ, ಸುಳ್ಯ ಯುನೈಟೆಡ್ ಕ್ಲಬ್ ಸಂಸ್ಥಾಪಕರೂ ಆದ ಶರೀಫ್ ಕಂಠಿ, ಅಲ್ ಅಮೀನ್ ಯೂತ್ ಸೆಂಟರ್(ರಿ.) ಪೈಚಾರ್ ಇದರ ಅಧ್ಯಕ್ಷರಾದ ಸತ್ತಾರ್ ಪೈಚಾರ್, ನಿಝಾರ್ ಸಿಟಿ ಡ್ರೀಮ್ಸ್, ನಿರ್ಣಾಯಕರಾದ ಸಲ್ಮಾನ್ ಫಾರಿಸ್ ಹಾಗೂ ಸಂಘಟಕರಾದ ಮಾಝ್ ಉಪ್ಪಳ ಮತ್ತು ತಮೀಮ್ ಸುಳ್ಯ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಿಝಾರ್ ಶೈನ್ ನಿರೂಪಿಸಿ,ವಂದಿಸಿದರು.

Leave a Reply

Your email address will not be published. Required fields are marked *