ನೂತನ ಎಸ್‌.ಐ. ಉದಯ ರವಿ ಅವರಿಗೆ ಸುಳ್ಯ ತಾಲೂಕು ಆಟೋ ಚಾಲಕರ ಸಂಘದಿಂದ ಅಭಿನಂದನೆ

News

ಸುಳ್ಯ: ಸುಳ್ಯ ಪೊಲೀಸ್‌ ಠಾಣೆಗೆ ನೂತನವಾಗಿ ಆಗಮಿಸಿದ ಸಬ್ ಇನ್ಸ್ಪೆಕ್ಟರ್ ಉದಯ ರವಿ ಅವರನ್ನು ಬಿಎಂಎಸ್‌ ಸಂಯೋಜಿತ ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘದ (ರಿ.) ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿ ಅಭಿನಂದಿಸಿದರು.

ಸಂಘದ ಅಧ್ಯಕ್ಷರಾದ ಪ್ರಕಾಶ್ ಎಂ.ಎಸ್. ಅವರು ನೂತನ ಎಸ್.ಐ. ಅವರಿಗೆ ಹೂಗುಚ್ಛ ನೀಡಿ ಶುಭ ಹಾರೈಸಿದರು. ಬಳಿಕ ಸೋದರತೆಯ ಸಂಕೇತವಾಗಿ ರಕ್ಷಾ ಬಂಧನವನ್ನು ಕಟ್ಟಿ, ಸೌಹಾರ್ದತೆಯ ಬಾಂಧವ್ಯವನ್ನು ವ್ಯಕ್ತಪಡಿಸಿದರು.

ಈ ಶುಭ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್.ಎಂ., ಕೋಶಾಧಿಕಾರಿ ರವಿ ಎಸ್., ಕಾನೂನು ಸಲಹೆಗಾರರಾದ ಭಾಸ್ಕರ್ ರಾವ್, ಸಂಘಟನಾ ಕಾರ್ಯದರ್ಶಿ ಸುಂದರ್ ಪೆರಾಜೆ ಹಾಗೂ ಜಂಟಿ ಕಾರ್ಯದರ್ಶಿ ಸುರೇಂದ್ರ ಕಾಮತ್ ಉಪಸ್ಥಿತರಿದ್ದರು.

ಅಲ್ಲದೆ, ಮಾಜಿ ಅಧ್ಯಕ್ಷರಾದ ರಾಧಾಕೃಷ್ಣ ಬೈತಡ್ಕ, ನಿರ್ದೇಶಕರಾದ ಭಾನು ಪ್ರಕಾಶ್, ಹರೀಶ್ ನೆಕ್ರಾಜೆ, ಪ್ರಸನ್ನ (ರಥಬೀದಿ), ಲೋಕೇಶ್ (ಬಸ್ ನಿಲ್ದಾಣ) ಮತ್ತು ಚಾಮಯ್ಯ (ಮಾರ್ಕೆಟ್ ರಸ್ತೆ) ಸೇರಿದಂತೆ ಸಂಘದ ಪ್ರಮುಖರು ಉಪಸ್ಥಿತರಿದ್ದು ನೂತನ ಅಧಿಕಾರಿಗೆ ಶುಭ ಕೋರಿದರು.

Leave a Reply

Your email address will not be published. Required fields are marked *