ನಿಂತಿಕಲ್ಲು. ಫೆ. 3 ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಮುಚ್ಚಿಲ ಎಂಬಲ್ಲಿ ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಕುಡಿಯುವ ನೀರಿಗೆ ಬೇಕಾಗಿ ನಿರ್ಮಿಸಲಾದ ಕೊಳವೆ ಬಾವಿಗೆ ಪಂಪು ಅಳವಡಿಸಿ ಆರು ಏಳು ತಿಂಗಳಿಂದ ಬಳಕೆದಾರರಿಗೆ ನೀರನ್ನು ಪೂರೈಸಿದ್ದು ಇದೇ ಜನವರಿ 31 ಶುಕ್ರವಾರದಂದು ಪಂಪಿಗೆ ಅಳವಡಿಸಿದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿರುತ್ತಾರೆ.
ಇದರಿಂದ ಮುಚ್ಚಿಲ ಭಾಗದ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಕೂಡಲೇ ಸಮಸ್ಯೆಯನ್ನು ಬಗೆಹರಿಸಿ ಈ ಭಾಗದ ನಿವಾಸಿಗಳ ಬೇಡಿಕೆ ಈಡೇರಿಸಿಕೊಡಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮುಚ್ಚಿಲ ಬ್ರಾಂಚ್ ಸಮಿತಿ ಆಗ್ರಹಿಸಿದೆ. ಇದೆ ಪಂಪಿಗೆ ಬೇಕಾಗಿ ಹೊಸ ವಿದ್ಯುತ್ ಪರಿವರ್ತಕವನ್ನು ಹಾಕಿ 6 ತಿಂಗಳಾದರು ಅದಕ್ಕೆ ವಿದ್ಯುತ್ ಸಂಪರ್ಕವನ್ನೂ ಕಲ್ಪಸಿರುವುದಿಲ್ಲ.
ಇದು ಜಲ ಜೀವನ್ ಮಿಷನ್ ಯೋಜನೆಯ ನಿರ್ಲಕ್ಷ್ಯ ತನದಿಂದ ಆಗಿರುವುದು ಎಂದು ತಿಳಿದು ಬಂದಿರುತ್ತದೆ.
ಅದೇ ರೀತಿ ಮುಚ್ಚಿಲದಲ್ಲಿ ಸೋಲಾರ್ ಲೈಟ್ ಕೆಟ್ಟು ಹೋಗಿ 4ತಿಂಗಳು ಕಳೆದಿದ್ದು ಕೂಡಲೇ ಅದನ್ನು ದುರಸ್ತಿ ಪಡಿಸಲು ಹಾಗೂ ಈ ಭಾಗದಲ್ಲಿ ಹೊಸ ಬೀದಿ ದೀಪಗಳ ಅವಶ್ಯಕತೆ ಇರುವುದರಿಂದ ಪಂಚಾಯತ್ ನಿಂದ ಹೊಸ ದೀಪಗಳನ್ನು ಅಳವಡಿಸಬೇಕು ಎಂದು ಕಲ್ಮಡ್ಕ ಗ್ರಾಮ ಪಂಚಾಯತ್ ಕಾರ್ಯದರ್ಶಿಯವರಿಗೆ ಮನವಿ ನೀಡುವ ಮೂಲಕ ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಬ್ರಾಂಚ್ ಸಮಿತಿ ಅಧ್ಯಕ್ಷರಾದ ಝುಬೈರ್ ಮುಚ್ಚಿಲ. ಬೆಳ್ಳಾರೆ ಬ್ಲಾಕ್ ಕಾರ್ಯದರ್ಶಿ ಹಮೀದ್ ಮರಕ್ಕಡ ಸದಸ್ಯರಾದ ಶರಪುದ್ದೀನ್ ಮುಚ್ಚಿಲ ನೀರು ಬಳಕೆದಾರ ಮನ್ಸೂರ್ ಮುಚ್ಚಿಲ ಉಪಸ್ಥಿತರಿದ್ದರು.