ಸುಳ್ಯ: ಫೆಬ್ರವರಿ 8 ಕುಡಿಯುವ ನೀರಿನ ಪೈಪ್ ಲೈನ್ ಹಾಕುವ ಸಂದರ್ಭದಲ್ಲಿ ನಗರದ ರಸ್ತೆ ಅಗೆದು ಹಾಕಿ, ವಾಹನ ಮತ್ತು ಜನ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದನ್ನು ನಗರ ಪಂಚಾಯತಿನ ಕಾರ್ಯನಿರ್ವಹಣಾಧಿಕಾರಿಗೆ SDPI ಸುಳ್ಯ ಇದರ ನಾಯಕರಾದ ಮೀರಝ್ ಸುಳ್ಯ ಮತ್ತು ಸಿದ್ದೀಕ್ ಸಿ.ಎ ಯವರು ಕೆಲ ದಿನಗಳ ಹಿಂದೆ ಲಿಖಿತವಾಗಿ ಮನವಿ ಮಾಡಿದ್ದರು, ಮತ್ತು ಅಧಿಕಾರಿಗಳು ತುರ್ತಾಗಿ ಸಮಸ್ಯೆಯನ್ನು ಬಗೆಹರಿಸುತ್ತೇವೆ ಅನ್ನುವ ಭರವಸೆಯನ್ನು ನೀಡಿದರು,
ಇದೀಗ ನಗರ ಪಂಚಾಯತ್ ರಸ್ತೆ ದುರಸ್ತಿಯನ್ನು ಆರಂಭಿಸಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ.


