ಮಾರ್ಕೆಟ್ ಸುಳ್ಯ ಫುಟ್‌ಬಾಲ್ ಪಂದ್ಯಾಕೂಟ; ಜೆಬಿ ಯುನೈಟೆಡ್’ಗೆ ಚಾಂಪಿಯನ್ ಹಾಗೂ ರನ್ನರ್ ಅಪ್ ಪ್ರಶಸ್ತಿ

News Sports

ಅರಂಬೂರಿನ ಟರ್ಫ್ ಮೈದಾನದಲ್ಲಿ ಮಾರ್ಕೆಟ್ ಸುಳ್ಯ ಎಫ್‌ಸಿ ಆಶ್ರಯದಲ್ಲಿ ಜರುಗಿದ ರೋಮಾಂಚಕ 5 ಜನರ ಫುಟ್‌ಬಾಲ್ ಪಂದ್ಯಾವಳಿಯು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಕಳೆದ ಎರಡು ಆದಿತ್ಯವಾರಗಳಲ್ಲಿ  ನಡೆದ ಈ ಪಂದ್ಯಾವಳಿಯಲ್ಲಿ, ಸೆ.27  ಆದಿತ್ಯವಾರ ನಡೆದ ಅಂಡರ್-18 ವಿಭಾಗದಲ್ಲಿ ಜೆಬಿ ಯುನೈಟೆಡ್ ‘ಬಿ’ ತಂಡವು ಫೈನಲ್ ಪ್ರವೇಶಿಸಿತ್ತು. ತದನಂತರ ನಿನ್ನೆ ಅ.4 ರಂದು ನಡೆದ ಅಂಡರ್-22 ವಿಭಾಗದ ಪಂದ್ಯದಲ್ಲಿ ಜೆಬಿ ಯುನೈಟೆಡ್ ‘ಎ’ ತಂಡವು ಫೈನಲ್ ತಲುಪಿತು. ಇದರೊಂದಿಗೆ ನಿನ್ನೆ ನಡೆದ ರೋಚಕ ಅಂತಿಮ ಹಣಾಹಣಿಯಲ್ಲಿ ಜೆಬಿ ಯುನೈಟೆಡ್ ‘ಎ’ ಮತ್ತು ಜೆಬಿ ಯುನೈಟೆಡ್ ‘ಬಿ’ ತಂಡಗಳು ಮುಖಾಮುಖಿಯಾದವು.

ಈ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಜೆಬಿ ಯುನೈಟೆಡ್ ‘ಎ’ ತಂಡವು ವಿಜೇತ ಗೌರವವನ್ನು ತನ್ನದಾಗಿಸಿಕೊಂಡರೆ, ಜೆಬಿ ಯುನೈಟೆಡ್ ‘ಬಿ’ ತಂಡವು ರನ್ನರ್ಸ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಇನ್ನು ವೈಯಕ್ತಿಕ ಸಾಧನೆಗಳಲ್ಲಿ ಶಾನಿದ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಹಾಗೆಯೇ ಅತ್ಯುತ್ತಮ ಗೋಲ್‌ಕೀಪರ್ ಆಗಿ ರಮ್‌ಷಾದ್ ಹಾಗೂ ಅತ್ಯುತ್ತಮ ಡಿಫೆಂಡರ್ ಆಗಿ ಅಫ್ಸಲ್ ಅವರು ಪ್ರಶಸ್ತಿಗಳಿಗೆ ಭಾಜನರಾದರು. ಕ್ರೀಡಾಭಿಮಾನಿಗಳ ಹರ್ಷೋದ್ಗಾರದೊಂದಿಗೆ ಪಂದ್ಯಾವಳಿಯು ಯಶಸ್ವಿಯಾಗಿ ಮುಕ್ತಾಯಗೊಂಡಿತು.

Leave a Reply

Your email address will not be published. Required fields are marked *