ಸುಳ್ಯದ ಜನತೆ ಅದೇನು ತಪ್ಪು ಮಾಡಿದ್ದರೋ ಎನೋ ಗೊತ್ತಿಲ್ಲ. ನಿರಂತರ ಒಂದಲ್ಲ ಒಂದು ಸಮಸ್ಯೆ ಎದುರಿಸತ್ತಲೇ ಇದ್ದಾರೆ.!! ಪ್ರತಿ ವಾರ ಲೋಡ್ ಶೆಡ್ಡಿಂಗ್ ಎಂಬ ನೆಪದಲ್ಲಿ ಮಂಗಳವಾರ ಕತ್ತಲಲ್ಲಿ ಸುಳ್ಯ, ಹಾಗೇ ಬೆಳಗ್ಗೆ 9 ಗಂಟೆಗೆ ವಿದ್ಯುತ್ ವ್ಯತ್ಯಯ ಎಂದರೆ ಅರ್ಧ ತಾಸು ಮೊದಲೇ ಪವರ್ ಕಟ್, ಇನ್ನೂ ಸಂಜೆ 6 ಗಂಟೆಗೆ ವಿದ್ಯುತ್ ಬರುತ್ತದೆ ಎಂಬ ಪ್ರಕಟನೇ ಇದ್ದರೇ, ವಿದ್ಯುತ್ ಸಂಪರ್ಕ ಬರುವುದು ಕೂಡಾ ಅರ್ಧ ತಾಸು ತಡ.?
ಇದನ್ನೆಲ್ಲ ಯಾರಲ್ಲಿ ಕೇಳುವುದು.? ಯಾರಲ್ಲಿ ತಮ್ಮ ಅಳಲನ್ನು ತೋಡುವುದು.? ಸಂಬಂಧಪಟ್ಟ ಅಧಿಕಾರಿಗಳು ಯಾಕೆ ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವುದಿಲ್ಲ.?
ಬೆಳಗ್ಗೆ ವಿದ್ಯುತ್ ಪೂರೈಕೆ ನಿಂತರೆ ಅಂದು ವ್ಯಾಪಾರ ವ್ಯವಹಾರಕ್ಕಾಗುವ ನಷ್ಟ ಎಷ್ಟು.?
ಹೋಟೆಲ್, ಐಸ್ ಕ್ರೀಂ ಅಂಗಡಿಗಳು, ಮಾಂಸದ ಅಂಗಡಿಗಳು, ಮೆಡಿಕಲ್, ಮಾಲೀಕರೆಲ್ಲ ಎಲ್ಲಿ ಹೋಗಬೇಕು.?
ಇನ್ನೂ ಮನೆಯಲ್ಲಿ ಗೃಹಣಿಯರು ಏನು ಮಾಡಬೇಕು, ಪ್ರತಿಯೊಂದು ಎಲೆಕ್ಟ್ರಾನಿಕ್ ಮಯವಾದ ನಂತರ ವಿದ್ಯುತ್ ಬೇಕೆ ಬೇಕು, ಇನ್ವರ್ಟರ್ ಇದ್ದರೆ ಎಷ್ಟು ಹೊತ್ತು ಬರಬಹುದು.? ಮನೆಯ ಟ್ಯಾಂಕ್ ಗೆ ನೀರು ಸರಬರಾಜು ಮಾಡಲು ಕೂಡಾ ಮೋಟರ್ ಓಡಲು ವಿದ್ಯುತ್ ಬೇಕು. ಹೀಗೆ ಹತ್ತು ಹಲವು ಸಮಸ್ಯೆಗಳ ಆಗರವಾಗಿದೆ ಸುಳ್ಯ..!! ಇನ್ನೂ ಶಾಲಾ- ಕಾಲೇಜುಗಳಲ್ಲಿ ಪರೀಕ್ಷೆಗಳು ಕೂಡಾ ಹತ್ತಿರವಾಗ್ತಾಯಿದೆ, ಈ ತರಹ ವಿದ್ಯುತ್ ಪೂರೈಕೆ ಅಸಮರ್ಪಕವಾಗಿದ್ದರೆ ಇವರೆಲ್ಲ ಎಲ್ಲಿ ಹೋಗಬೇಕು, ಎಂಬುದಾಗಿದೆ ಎಂಬ ಯಕ್ಷ ಪ್ರಶ್ನೆಯಾಗಿದೆ