ವಿಟ್ಲ: ಕುಂಡಡ್ಕ ಬದ್ರಿಯಾ ಜುಮಾ ಮಸೀದಿಯ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷ ಶಾಂತಿಮಾರು ಅಬೂಬಕ್ಕರ್ ನಿಧನ

News

ವಿಟ್ಲ: ಕುಂಡಡ್ಕ ಬದ್ರಿಯಾ ಜುಮಾ ಮಸೀದಿಯ ಜಮಾಅತ್‌ಗೆ ಒಳಪಟ್ಟ ಶಾಂತಿಮಾರು ನಿವಾಸಿ ಹಾಗೂ ಮಸೀದಿ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರಾದ ಶಾಂತಿಮಾರು ಅಬೂಬಕ್ಕರ್ ಬ್ಯಾರಿ ಅವರು ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಬೆಳಗಿನ ಜಾವ 04:00 ಗಂಟೆಗೆ ನಿಧನರಾಗಿದ್ದಾರೆ.

ಮೃತರು ಇರ್ಷಾದ್, ಶಾಹೀದ್, ಹಮೀದ್, ಮಜೀದ್ ಸೇರಿದಂತೆ ನಾಲ್ವರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಅಲ್ಲದೆ, ಇವರು ಸುಳ್ಯದ ನಾಸಿರ್ ಬಾರ್ಪಣೆ ಅವರ ಧರ್ಮಪತ್ನಿಯ ತಂದೆಯಾಗಿದ್ದಾರೆ.

ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಕುಂಡಡ್ಕ ಬದ್ರಿಯಾ ಜುಮಾ ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರ ನಿಧನಕ್ಕೆ ಸ್ಥಳೀಯ ಜಮಾಅತ್ ಸಮಿತಿ, ಬಂಧು-ಬಳಗ ಹಾಗೂ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *