ಮಂಜೇಶ್ವರ ಉದ್ಯಾವರ ಬಳಿ ಮುಂಜಾನೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಹಾಗೂ ಲಾರಿ ಡಿಕ್ಕಿ ಸಂಭವಿಸಿದ್ದು, ಹಿಂಬದಿಯಿಂದ ಲಾರಿ ಬಂದು ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ಕುಬನೂರು ಬೇಕೂರು ನಿವಾಸಿ ಮೊಹಮ್ಮದ್ ಅನ್ವಾಝ್ (24) ಮೃತಪಟ್ಟಿದ್ದಾರೆ. ಚಾಲಕ ಅಂಗಡಿಮೊಗರು ನಿವಾಸಿ ಫಝಲ್ ರೆಹಮಾನ್ ಗಂಭೀರಗಾಯಗೊಂಡಿದ್ದು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
