ಕೆಲವು ಆಲೋಚನೆಗಳು ಮತ್ತು ಕುತೂಹಲಗಳು ಹಲವು ಉತ್ತಮ ಸಂಶೋಧನೆಗಳಿಗೆ ಕಾರಣವಾಗಬಹುದು: ವಿಜ್ಞಾನ ಶಿಕ್ಷಕಿ ಉಷಾ. ಕೆ
ಎನ್ನೆಂಸಿ ಸುಳ್ಯ; ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ವಿಜ್ಞಾನ ಸಂಘದ ವತಿಯಿಂದ ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮ ಮಾರ್ಚ್ 13 ಗುರುವಾರದಂದು ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಜ್ಞಾನದೀಪ ಪ್ರೌಢಶಾಲೆ ಎಲಿಮಲೆ ಇಲ್ಲಿನ ಹಿರಿಯ ವಿಜ್ಞಾನ ಶಿಕ್ಷಕಿ ಉಷಾ ಕೆ ಇವರು ಯುವ ಮನಸ್ಸುಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವ ಕುರಿತು ಬಹಳ ಉತ್ತಮವಾಗಿ ವಿದ್ಯಾರ್ಥಿಗಳ ಮನಮುಟ್ಟುವಂತೆ ವಿವರಿಸಿದರು. ಕೆಲವು ಸಂದೇಹಗಳು, ಆಲೋಚನೆಗಳು ಮತ್ತು ಕುತೂಹಲಗಳು ಹಲವು ಉತ್ತಮ ಸಂಶೋಧನೆಗಳಿಗೆ ಕಾರಣವಾಗಬಹುದು ಎಂದರು. ವಿಜ್ಞಾನದ ಬೆಳವಣಿಗೆಯಲ್ಲಿ ಅವಿಷ್ಕಾರಗಳಲ್ಲಿ ಒಂದಿಷ್ಟು ಕುತೂಹಲಕರವಾದ ವಿಷಯಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಕಾಲೇಜಿನ ಐಕ್ಯೂಎಸಿ ಸಂಯೋಜಕಿ ಡಾ. ಮಮತಾ ಕೆ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ ವಹಿಸಿದ್ದರು. ವೇದಿಕೆಯಲ್ಲಿ ವಿಜ್ಞಾನ ಪದವಿ ವಿಭಾಗದ ಸಂಯೋಜಕರಾದ ಪ್ರೊ. ಸತ್ಯಪ್ರಕಾಶ್ ಡಿ, ವಿಜ್ಞಾನ ಸಂಘದ ಸಂಯೋಜಕಿ ಅಶ್ವಿನಿ ಕೆ ಉಪಸ್ಥಿತರಿದ್ದರು.
ವಿಜ್ಞಾನ ಸಂಘದ ಸದಸ್ಯರಾದ ಕು. ಶಿಲ್ಪ ಮತ್ತು ತಂಡದವರು ಪ್ರಾರ್ಥಿಸಿ, ಅಂತಿಮ ಬಿ.ಎಸ್ಸಿ ವಿದ್ಯಾರ್ಥಿನಿ ಕು. ಆಶಿತಾ ಯು. ಎ. ಸ್ವಾಗತಿಸಿದರು. ವಿಜ್ಞಾನ ಸಂಘದ ಕಾರ್ಯದರ್ಶಿ ಕು. ರಕ್ಷಿತಾ ಕೆ ಉದ್ಘಾಟಕರನ್ನು ಪರಿಚಯಿಸಿ, ಖಜಾಂಜಿ ಕಾರ್ತಿಕ್ ವಂದಿಸಿದರು. ಅಂತಿಮ ಬಿ.ಎಸ್ಸಿ ವಿದ್ಯಾರ್ಥಿನಿ ಕು. ಉಜಾನ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಉಪನ್ಯಾಸಕರಾದ ಸಂಜೀವ ಕೆ, ಉಷಾ ಎಂ ಪಿ, ಅಕ್ಷತಾ, ಕುಲದೀಪ್, ಕೃತಿಕಾ, ಹರ್ಷಕಿರಣ, ಅಜಿತ್ ಕುಮಾರ್, ಮಮ್ತಾ, ಹರ್ಷಿತಾ ಮತ್ತು ಪಲ್ಲವಿ ಹಾಗೂ ಸಿಬ್ಬಂದಿಗಳಾದ ಜಯಂತಿ, ಸೌಮ್ಯ, ಗೀತಾ, ಭವ್ಯ ಮತ್ತು ಶಿವಾನಂದ ಹಾಗೂ ಎಲ್ಲಾ ವಿದ್ಯಾರ್ಥಿಗಳು ಸಹಕರಿಸಿದರು.