ಸಾಮಾಜಿಕ ಕಳಕಳಿ ಹಾಗೂ ಮಾನವೀಯ ಸೇವೆಯ ಉದ್ದೇಶದೊಂದಿಗೆ ರಫಾ ಫೌಂಡೇಶನ್ ಮತ್ತು ಅಲ್ ಫಲಾಹ್ ಯಂಗ್ ಮೆನ್ಸ್ ಅಸೋಸಿಯೇಷನ್ ಇದರ ಜಂಟಿ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.
ಬೆಳ್ಳಾರೆ ಜುಮಾ ಮಸೀದಿಯ ಖತೀಬಾರದ ನಸೀಹ್ ದಾರಿಮಿ ದುವಾದೊಂದಿಗೆ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿ ಮಾತನಾಡಿ, ರಕ್ತದಾನವು ಜೀವ ಉಳಿಸುವ ಮಹತ್ಕಾರ್ಯವಾಗಿದ್ದು, ಒಬ್ಬ ವ್ಯಕ್ತಿ ಮಾಡುವ ರಕ್ತದಾನದಿಂದ ಮತ್ತೊಬ್ಬರಿಗೆ ಹೊಸ ಜೀವನ ನೀಡಲು ಸಾಧ್ಯವಿದೆ. ರಕ್ತಕ್ಕೆ ಪರ್ಯಾಯವಿಲ್ಲದ ಕಾರಣ ಯುವಜನತೆ ಸ್ವಯಂಪ್ರೇರಿತವಾಗಿ ರಕ್ತದಾನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.ವೇದಿಕೆಯಲ್ಲಿ ಪಾಲ್ತಾಡ್ ಖತೀಬರಾಗಿರುವ ಇಲ್ಯಾಸ್ ಮದನಿ,ಜಮಾಅತ್ ಅಧ್ಯಕ್ಷ ಅಬ್ದುಲ್ಲ ಆಲಂದಡ್ಕ, ರೆಡ್ ಕ್ರಾಸ್ ಸುಳ್ಯ ಸಭಾಪತಿ ಸುಧಾಕರ್ ರೈ ಸುಳ್ಯ,ರೋಟರಿ ಬೆಳ್ಳಾರೆ ಅಧ್ಯಕ್ಷರಾಗಿರುವ ಆರಿಫ್ ಬೆಳ್ಳಾರೆ, ಡಿ ಗ್ರೂಪ್ ವಿಟ್ಲ ಅಧ್ಯಕ್ಷರಾಗಿರುವ ಶಾಕಿರ್ ಅಳಕೆಮಜಲು, ರಾಜಕೀಯ ಧುರೀಣರಾಗಿರುವ ಅಬ್ದುಲ್ ಖಾದರ್ ಮೇರ್ಲ,ಉದ್ಯಮಿಗಳಾಗಿರುವ ಉಬೈದ್ ವಿಟ್ಲ ಬಜಾರ್,ಸಲೀಂ ಇಚ್ಚ ಶಾಕಿರ್ ಕಂಬಳಬೆಟ್ಟು, ರಾಝಿ ಕಿಸ್ವಾ ವಿಟ್ಲ, ಫೈಝಲ್ ಕಟ್ಟೆಕ್ಕಾರ್,ಅಬ್ಕ ಬೆಳ್ಳಾರೆ, ಯಾಹ್ಯ ಬೆಳ್ಳಾರೆ, ರಝಕ್ ಹಾಜಿ ಪಾಲ್ತಾಡ್ ,ಹನೀಫ್ ಪಾಲ್ತಾಡ್ ಉಪಸ್ಥಿತರಿದ್ದರು.
ಶಿಬಿರದಲ್ಲಿ ಹಲವಾರು ರಕ್ತದಾನಿಗಳು ಉತ್ಸಾಹದಿಂದ ಭಾಗವಹಿಸಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು. ರಕ್ತದಾನಿಗಳಿಗೆ ಅಗತ್ಯ ಆರೋಗ್ಯ ತಪಾಸಣೆ ನಡೆಸಿ, ವೈದ್ಯಕೀಯ ತಂಡದ ಮಾರ್ಗದರ್ಶನದಲ್ಲಿ ರಕ್ತ ಸಂಗ್ರಹಿಸಲಾಯಿತು.
ಸಮಾಜದಲ್ಲಿ ರಕ್ತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ, ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇರುವ ರೋಗಿಗಳಿಗೆ ನೆರವಾಗುವ ಸದುದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಎರಡೂ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ವೈದ್ಯಕೀಯ ಸಿಬ್ಬಂದಿ, ಸ್ವಯಂಸೇವಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಶಿಬಿರದ ಯಶಸ್ಸಿಗೆ ಅಲ್ ಫಲಾಹ್ ಯಂಗ್ ಮೆನ್ಸ್ ಅಸೋಸಿಯೇಷನ್ ಸರ್ವ ಸದಸ್ಯರು ಹಾಗೂ ರಫಾ ಫೌಂಡೇಶನ್ ಸಂಸ್ಥಾಪಕರಾಗಿರುವ ರವೂಫ್ ಪಾಲ್ತಾಡ್ ಸಹಕರಿಸಿದರು.ಶರೀಫ್ ನೆಟ್ಟಾರ್ ಸ್ವಾಗತಿಸಿ ಅಬ್ದುಲ್ ರಝಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.
ಸಂಘಟಕರಾಗಿರುವ ಪವಾಝ್ ಪಾಲ್ತಾಡ್ ಬಶೀರ್ ಪಾಲ್ತಾಡ್ ಉತ್ತಮ ರೀತಿಯಲ್ಲಿ ಸಹಕರಿಸಿದರು.
ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಸಹಕರಿಸಿದ ಎಲ್ಲಾ ರಕ್ತದಾನಿಗಳಿಗೆ, ವೈದ್ಯಕೀಯ ತಂಡಕ್ಕೆ, ಸಂಘಟಕರಿಗೆ ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಸಂಘಟನೆಯ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.
