ಸುಳ್ಯ ನಗರ ಯೋಜನಾ ಪ್ರಾಧಿಕಾರದ ಪ್ರಪ್ರಥಮ ಅಧ್ಯಕ್ಷರಾಗಿ ನಗರ ಪಂಚಾಯತ್ ಸದಸ್ಯರಾಗಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಹಿರಿಯ ಅನುಭವಿ ರಾಜಕಾರಣಿ ಕೆ.ಎಂ.ಮುಸ್ತಫ ರವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇಮಕ ಮಾಡಿದ್ದಾರೆ.
ಹಿಂದೊಮ್ಮೆ ಸುಳ್ಯ ನಗರ ಪಂಚಾಯತ್ ನಲ್ಲಿ ಕಾಂಗ್ರೆಸ್ ಬಹುಮತ ಗಳಿಸಿದಾಗ ಅದರ ಅಧ್ಯಕ್ಷತೆಯ ಅಭ್ಯರ್ಥಿಯಾಗಿ ಮುಸ್ತಫರವರನ್ನು ಪಕ್ಷ ಆಯ್ಕೆ ಮಾಡಿತ್ತು. ಆದರೆ ಪಕ್ಷದೊಳಗೆ ಎದ್ದ ಬಂಡಾಯದಿಂದಾಗಿ ಅಧ್ಯಕ್ಷತೆ ಅವರ ಕೈತಪ್ಪಿತ್ತು. ಈಗ ಮುಸ್ತಫರವರ ಈ ನೇಮಕಾತಿಗೆ ಪಕ್ಷದ ಎಲ್ಲಾ ವರ್ಗದ ನಾಯಕರ ಬೆಂಬಲ ದೊರಕಿರುವುದರಿಂದ ಮತ್ತು ಅವರು ಎಲ್ಲ ಪಕ್ಷದವರೂ ಗೌರವಿಸುವ ವ್ಯಕ್ತಿಯಾದ ಕಾರಣ ಸುಳ್ಯ ನಗರದ ಸಮಸ್ಯೆಗಳಿಗೆ ಔಷಧ ಕಂಡುಕೊಳ್ಳುವಲ್ಲಿ ಸಮರ್ಥರಾಗುತ್ತಾರೆಂದು ಅವರ ಆಪ್ತ ವಲಯದವರು ಅಭಿಪ್ರಾಯಪಟ್ಟಿದ್ದಾರೆ.