ಏ.8: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ದ್ವಿತೀಯ ಪಿಯುಸಿ ಪರೀಕ್ಷೆ -1 ರ ಫಲಿತಾಂಶಗಳನ್ನು ಮಂಗಳವಾರ ಪ್ರಕಟಿಸಿದ್ದು, ರಾಜ್ಯದಲ್ಲಿ ಒಟ್ಟಾರೆ ಶೇಕಡಾವಾರು 73.45 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಕಳೆದ ವರ್ಷದ ಶೇಕಡಾ 81.15ಕ್ಕೆ ಹೋಲಿಸಿದರೆ ಫಲಿತಾಂಶದಲ್ಲಿ ಶೇ. 7.7 ರಷ್ಟು ಕುಸಿತ ಕಂಡಿದೆ. ಈ ಮಧ್ಯೆ ಕೆ.ವಿ.ಜಿ ಅಮರ ಜ್ಯೊತಿ ಪಿಯು ಕಾಲೇಜಿನ ವಿದ್ಯಾರ್ಥಿ ಮುಹಮ್ಮದ್ ಲಾಝಿಮ್ ವಾಣಿಜ್ಯ ವಿಭಾಗದಲ್ಲಿ ಸುಳ್ಯ ತಾಲೂಕಿಗೆ ಪ್ರಥಮ ಸ್ಥಾನಿಯಾಗಿದ್ದಾನೆ. 600 ಅಂಕಗಳಲ್ಲಿ ಒಟ್ಟು 588 (ಇಕಾನಾಮಿಕ್ಸ್ ೧೦೦, ಅಕೌಂಟೆನ್ಸಿ ೧೦೦, ಬ್ಯುಸಿನೆಸ್ ಸ್ಟಡೀಸ್ ೯೯, ಸ್ಟಾಟಿಸ್ಟಿಕ್ಸ್ ೯೯, ಹಿಂದಿ ೯೪, ಇಂಗ್ಲಿಷ್ ೯೫) ಅಂಕಗಳನ್ನು ಪಡೆದಿದ್ದಾನೆ ಈ ವಿದ್ಯಾರ್ಥಿ ಲತೀಫ್ ಶಿಲ್ಪ ಹಾಗೂ ಝುಬೈದ ದಂಪತಿಗಳ ಪುತ್ರ