ಅಲ್-ಅಮೀನ್ ಯೂತ್ ಸೆಂಟರ್ ಪೈಚಾರ್ ಅಧ್ಯಕ್ಷರಾದ ಸತ್ತಾರ್ ಪೈಚಾರ್ ಇವರ ತಂದೆ, ಹಿರಿಯ ಉದ್ಯಮಿ ಅಬೂಬಕ್ಕರ್ ಹಾಜಿ ಪೈಚಾರ್ ಅಲ್ಪ ಕಾಲದಿಂದ ಅನಾರೋಗ್ಯ ದಿಂದ ನಿಧನರಾಗಿದ್ದಾರೆ. ಪೈಚಾರ್ ನಿವಾಸಿ ಮೇರು ವ್ಯಕ್ತಿತ್ವದ, ಪೈಚಾರ್ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಹಲವಾರು ಕಾಲ ಅಧ್ಯಕ್ಷರಾಗಿ ಸೇವೆಸಲ್ಲಿಸಿ ಮಸೀದಿ ಮತ್ತು ಮದರಸ ಅಭಿವೃದ್ಧಿ ಗೆ ಮೂಲ ಕಾರಣರಾಗಿದ್ದ, ಪೈಚಾರ್ ಅಬೂಬಕ್ಕರ್ ಹಾಜಿ ಕುಕ್ಕುತಡಿ ಇಂದು ನಿಧನರಾಗಿದ್ದಾರೆ, ಅವರಿಗೆ ಸುಮಾರು 89 ವರ್ಷ ವಯಸ್ಸು ಅಗಿತ್ತು. ಮಯ್ಯತ್ ನಮಾಝ್ ಜುಮ ನಮಾಝ್ ನಂತರ ಈದಿನ ಪೈಚಾರ್ ಜುಮಾ ಮಸೀದಿಯಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ. ಮೃತರು ಪುತ್ರರಾದ ಸುಳ್ಯ ಗೋಲ್ಡನ್ ಟವರ್ ಮಾಲಕ ಉಮ್ಮರ್, ಶಾಝ್ ವಸ್ತ್ರ ಮಳಿಗೆಯ ಶರೀಫ್, ಬೇಬಿ ಶಾಫ್ನ ಸತ್ತಾರ್, ಮಹಮ್ಮದ್ ಹಾಗೂ ಪುತ್ರಿಯರನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.