ಸುಳ್ಯದ ಕ್ಎ.ವಿ.ಜಿ ಕ್ಯಾಂಪಸ್ ಬಳಿ ಕಾಲೇಜು ವಿದ್ಯಾರ್ಥಿನಿಯೋರ್ವಳಿಗೆ ತಿಂಡಿ(ಉಣ್ಣಿಅಪ್ಪ ತಂದು ಕೊಟ್ಟ ಯುವಕನೋರ್ವನಿಗೆ ಸ್ಥಳೀಯ ಕೆಲವು ಯುವಕರು ಥಳಿಸಿದ ಘಟನೆ ಏ. ೧೬ ರಂದು ರಾತ್ರಿ ವರದಿಯಾಗಿದೆ. ವಿದ್ಯಾರ್ಥಿನಿಗೆ ಆಕೆಯ ಕಾಲೇಜು ಸಹಪಾಠಿ ಎನ್ನಲಾಗಿರುವ ಯುವಕನೋರ್ವ ತಿಂಡಿ ತಂದು ಕೊಟ್ಟಿದ್ದ ಎಂದು ಹೇಳಲಾಗಿದ್ದು, ಇದನ್ನು ಗಮನಿಸಿದ ಕೆಲವು ಯುವಕರು ಆತನನ್ನು ಕರೆಸಿ ವಿಚಾರಿಸಿದರೆಂದೂ, ಆತನ ಉತ್ತರದಿಂದ ಹೆಚ್ಚು ಅನುಮಾನಕ್ಕೊಳಗಾದ ಅವರು ಆತನಿಗೆ ಥಳಿಸಿದರೆಂದೂ ವರದಿಯಾಗಿದೆ. ಕೆಲ ಕಾಲ ಎರಡು ಗುಂಪಿನವರು ಮಾತಿನ ಚಕಮಾಕಿ ನಡೆದು, ಈ ವಿಷಯ ತಿಳಿದ ಪೋಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಆಗಾಗಲೇ ಯುವಕರೆಲ್ಲ ಜಾಗ ಖಾಲಿ ಮಾಡಿದ್ದರೆಂದೂ ಹೇಳಲಾಗಿದೆ.


