ರಾಯಚೂರಿನಲ್ಲಿ ಮೊಹರಂ ಆಚರಣೆ ವೇಳೆ ಕೊಂಡ ಹಾಯುವಾಗ (Muharram 2024) ವ್ಯಕ್ತಿಯೊಬ್ಬ ಆಯತಪ್ಪಿ ಬಿದ್ದು ಸುಟ್ಟು ಭಸ್ಮವಾಗಿದ್ದಾರೆ. ರಾಯಚೂರಿನ ಮಸ್ಕಿ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ತಡರಾತ್ರಿ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಯಮನಪ್ಪ ನಾಯಕ್ (45)ಮೃತ ದುರ್ದೈವಿ.
ನಿಗಿ ನಿಗಿ ಕೆಂಡದಲ್ಲಿ ಬೇಯುವ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ. ಮೊಹರಂ ಹಬ್ಬ ಆಚರಣೆ ವೇಳೆ ಕೊಂಡ ಹಾಯುವುದು ಪದ್ಧತಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿದೆ. ಅದರಂತೆ ಬೆಂಕಿ ಹಾಯಲು ಯಮನಪ್ಪ ಮುಂದಾಗಿದ್ದರು. ಕೊಂಡ ಹಾಯುವಾಗ ಆಯತಪ್ಪಿ ಬೆಂಕಿಯೊಳಗೆ ಬಿದ್ದ ಪರಿಣಾಮ ಸುಟ್ಟುಕರಕಲಾಗಿದ್ದಾರೆ.
ಕೂಡಲೇ ಅಲ್ಲಿದ್ದವರು ಬೆಂಕಿ ಹಾರಿಸಲು ನೀರು ಎರಚಿ ರಕ್ಷಣೆ ಮುಂದಾದರೂ, ಆದರೆ ತೀವ್ರ ಬೆಂಕಿ ಆವರಿಸಿ ಯಮನಪ್ಪ ಸುಟ್ಟುಭಸ್ಮವಾದರು. ತುರುವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊಹರಂ ಹಬ್ಬದ ಆಚರಣೆ ವೇಳೆ ಪೊಲೀಸ್ರಿಂದ ಲಾಠಿ ಚಾರ್ಜ್ ನಡೆದಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಪಾಶ್ಚಾಪೂರ ಗ್ರಾಮದಲ್ಲಿ ಘಟನೆ ನಡೆದಿದೆ. ಪಾಶ್ಚಾಪುರ ಗ್ರಾಮದ ನಡುವಿನ ಪೇಟೆ ಬಳಿ ಬಂದಾಗ ಏಕಾಏಕಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಎನ್ನಲಾಗಿದೆ. ಹೀಗಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಎರಡು ದೇವರ ಭೇಟಿ ಸಂದರ್ಭದಲ್ಲಿ ಟೊನ್ನೆಬಾವು, ಕರಬಾಲ ಎಂಬ ಸಂಪ್ರದಾಯದ ಆಚರಣೆ ವೇಳೆ ಘಟನೆ ನಡೆದಿದೆ. ಸ್ಥಳದಲ್ಲಿದ್ದ ಯಮಕನಮರಡಿ ಪೊಲೀಸ್ ಠಾಣೆಯ ಎಎಸ್ಐ ಮುರಗೋಡ ಹಾಗೂ ಓರ್ವ ಪೋಲಿಸ್ ಪೇದೆ ಮೇಲೆ ಹಲ್ಲೆ ನಡೆಸಲಾಗಿದೆ. ಉದ್ದೇಶಪೂರ್ವಕವಾಗಿ ಪೊಲೀಸರ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪಿದೆ.