ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮತ್ತು ಹಲವು ಗಣ್ಯರ ಉಪಸ್ಥಿತಿ

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಕಾನತ್ತಿಲ ಉಳ್ಳಾಕುಳು ದೈವಸ್ಥಾನ (ಮಾಡ) ರಸ್ತೆಗೆ ಸಂಸದರಾದ ಸನ್ಮಾನ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟಾರವರು ಒದಗಿಸಿದ ರೂ. 5 ಲಕ್ಷ ಅನುದಾನದಲ್ಲಿ ಕಾಂಕ್ರೀಟೀಕರಣ ಮತ್ತು ಸುಳ್ಯ ನಗರ ಪಂಚಾಯತ್ ಅನುದಾನ ಮೂಲಕ ಯೋಜಿಸಿದ ರಸ್ತೆ ಅಗಲೀಕರಣ ಕಾರ್ಯಕ್ರಮವನ್ನು ದಿನಾಂಕ 29 ಮಂಗಳವಾರದಂದು ಕಾನತ್ತಿಲ ಉಳ್ಳಾಕುಳು ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಹೇಮನಾಥ ಕುರುಂಜಿಯವರು ಶ್ರೀ ಮಹಾಗಣಪತಿ ದೇವರನ್ನು ಪ್ರಾರ್ಥಿಸಿ ದೀಪ ಬೆಳಗಿ, ಮಾನ್ಯ ಶಾಸಕರಾದ ಭಾಗೀರಥಿ ಮುರುಳ್ಯರವರು ತೆಂಗಿನಕಾಯಿ ಒಡೆದು ಗುದ್ದಲಿ ಪೂಜೆ ನೆರವೇರಿಸಿದರು.

ಅನುದಾನ ಒದಗಿಸಿಕೊಡುವಲ್ಲಿ ಶ್ರಮವಹಿಸಿದ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರಾದ ವೆಂಕಟ್ ವಳಲಂಬೆ, ಬಿಜೆಪಿ ನಗರ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಕುಸುಮಾಧರ ಎ.ಟಿ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ ನೀರಬಿದಿರೆ ಮತ್ತು ಮಾಜಿ ಉಪಾಧ್ಯಕ್ಷರು ಹಾಗೂ ಸ್ಥಳೀಯ ಸದಸ್ಯರಾದ ಸರೋಜಿನಿ ಪೆಲ್ತಡ್ಕ, ನಗರ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಸದಸ್ಯರಾದ ಸುಧಾಕರ್ ಉಪಸ್ಥಿತರಿದ್ದರು. ರಸ್ತೆ ಅಗಲೀಕರಣಕ್ಕೆ ಅಗತ್ಯ ಸ್ಥಳದಾನಿಗಳಾದ ವೆಂಕಟರಮಣ ಭಟ್ (ಶರಧಿ) ಇವರ ಕೊಡುಗೆಯನ್ನು ಪ್ರಶಂಶಿಸಿದರು.

ಬಿಜೆಪಿ ನಗರ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಕುಸುಮಾಧರ ಎ.ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕುಲದೀಪ್ ಪೆಲ್ತಡ್ಕ ಸ್ವಾಗತಿಸಿ, ಬಿಜೆಪಿ ನಗರ ಶಕ್ತಿ ಕೇಂದ್ರದ ಕಾರ್ಯದರ್ಶಿ ನಾರಾಯಣ ಎಸ್ ವಂದಿಸಿದರು.

ಸ್ಥಳೀಯ ಸಂಘಟಕರಾದ ನ್ಯಾಯವಾದಿ ದಿನೇಶ್ ಮಡಪ್ಪಾಡಿ, ಕಾನತ್ತಿಲ ಉಳ್ಳಾಕುಳು ದೈವಸ್ಥಾನದ ಆಡಳಿತ ಸಮಿತಿ ಕಾರ್ಯದರ್ಶಿ ಸಂದೇಶ್ ಕುರುಂಜಿ, ಶ್ರೀ ರಾಮ ಭಜನಾ ಸೇವಾ ಸಮಿತಿ ಅಧ್ಯಕ್ಷರಾದ ಹರಿಶ್ಚಂದ್ರ ಎಂ.ಆರ್, ಕಾರ್ಯದರ್ಶಿ ರಘುನಾಥ್ ಜಟ್ಟಿಪಳ್ಳ, ಪತ್ರಕರ್ತ ಸಂಘದ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಸ್ಥಳೀಯ ಹಿರಿಯರಾದ ಮೋಹನ್ ದೇವರಗುಂಡ, ವಿಶ್ವನಾಥ್ ಪೆರುಮುಂಡ, ಪುರುಷೋತ್ತಮ ಕನ್ನಡ್ಕ, ಮೋನಪ್ಪ ನಾರಾಲು, ಸುಶೀಲ, ಸವಿತಾ ಸತೀಶ್, ಸತ್ಯನಾರಾಯಣ ಭಟ್, ಸಂತೋಷ್ ಕುಮಾರ್ ಭಂಡಾರಿ, ಪ್ರಕಾಶ್ ಭಂಡಾರಿ, ಸುಂದರ ಪೂಜಾರಿ, ನಿಕೇಶ್ ಉಬರಡ್ಕ, ದಕೋಜಿ ರಾವ್, ಶಿವಪ್ರಕಾಶ್ ಕುತ್ಪಾಜೆ, ಯಜ್ಞೇಶ್ ಕಾನತ್ತಿಲ, ಭಾ.ಜ.ಪ. ವಾರ್ಡ್ ಸಮಿತಿ ಕಾನತ್ತಿಲದ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಕಂಟ್ರಾಕ್ಟರ್ ದಾರರಾದ ಹರಿಪ್ರಸಾದ್ ಎಲಿಮಲೆ ಉಪಸ್ಥಿತರಿದ್ದರು ಹಾಗೂ ರಸ್ತೆಯ ಫಲಾನುಭವಿ ನಾಗರಿಕ ಬಂಧುಗಳು ಇದ್ದು ರಸ್ತೆ ಅಭಿವೃದ್ದಿ ಯೋಜನೆಯ ಕಾರ್ಯರೂಪಕ್ಕೆ ಸಾಕ್ಷಿಗಳಾದರು.

Leave a Reply

Your email address will not be published. Required fields are marked *