ಸುಳ್ಯದ ವಾಸವಿ ಸಾಹಿತ್ಯ ಕಲಾ ವೇದಿಕೆ ವತಿಯಿಂದ ನಾಳೆ ಮೇ.18 ರಂದು ನಡೆಯುವ ಡಾ.ವೀಣಾ ಎನ್. ಸುಳ್ಯ ಇವರ ಕವನ ಸಂಕಲನ ಭಾವಲಹರಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕನ್ನಡದ ಖ್ಯಾತ ಸಾಹಿತಿ ಹಾಗೂ ಥಟ್ ಅಂತ ಹೇಳಿ ಕಾರ್ಯಕ್ರಮದ ರೂವಾರಿ ಡಾ. ನಾ ಸೋಮೇಶ್ವರ ರವರು ಸುಳ್ಯಕ್ಕೆ ಬರಲಿದ್ದಾರೆ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಖ್ಯಾತ ಸಾಹಿತಿ ಡಾ.ವಸುಂಧರಾ ಭೂಪತಿ ಪುಸ್ತಕ ಲೋಕಾರ್ಪಣೆ ಮಾಡುವರು. ಶ್ರೀಮತಿ ಲೀಲಾ ದಾಮೋದರ್ ಹಾಗೂ ವೆಂಕಟ್ರಾಮ ಭಟ್ ಅಭ್ಯಾಗತರಾಗಿರುವರು.

🛒 Recommended for You:
‘ಥಟ್ ಅಂತ ಹೇಳಿ’ ಪುಸ್ತಕ ಬಿಡುಗಡೆಯ ಬಳಿಕ ಥಟ್ ಅಂತ ಹೇಳಿ ಖ್ಯಾತಿಯ ಡಾ. ನಾ ಸೋಮೇಶ್ವರ ರಿಂದ ಸಾರ್ವಜನಿಕರಿಗೆ ರಸಪ್ರಶ್ನೆ ಕರ್ನಾಟಕ – ಕನ್ನಡ – ಕನ್ನಡಿಗ ವಿಶೇಷ ಕಾರ್ಯಕ್ರಮ ನಡೆಯಲಿದೆ. ಈ ರಸಪ್ರಶ್ನೆಯಲ್ಲಿ ಭಾಗವಹಿಸಲು ಮೂರು ಮಂದಿಯ ತಂಡಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಾಳೆ ಮಧ್ಯಾಹ್ನ ಒಂದು ಗಂಟೆಯಿಂದ ನಡೆಯುವುದು.




