ಬೆಂಗಳೂರು : 1 ನೇ ತರಗತಿಗೆ ಸೇರುವ ಮಕ್ಕಳಿಗೆ ಜೂನ್ 1ಕ್ಕೆ 6 ವರ್ಷ ಪೂರ್ಣಗೊಂಡಿರಬೇಕು ಎಂಬ ನಿಯಮ ರೂಪಿಸಲಾಗಿದೆ. ಆದರೆ, ಈ ನಿಯಮ 2025-26ನೇ ಶೈಕ್ಷಣಿಕ ಸಾಲಿಗೆ ಅನ್ವಯಿಸುವುದಿಲ್ಲ. ಮುಂದಿನ ವರ್ಷದಿಂದ ಶಾಲೆಗೆ ಸೇರಿಸುವ ಮಕ್ಕಳಿಗೆ ಈ ನಿಯಮ ಕಡ್ಡಾಯ. 2026-27ನೇ ಶೈಕ್ಷಣಿಕ ವರ್ಷದಿಂದ ಜೂನ್ ಒಂದನೇ ತಾರೀಖಿಗೆ 06 ವರ್ಷಗಳು ಪೂರ್ಣಗೊಂಡಿರುವ ಮಕ್ಕಳನ್ನು ಮಾತ್ರ ಒಂದನೇ ತರಗತಿಗೆ ದಾಖಲಿಸಿಕೊಳ್ಳತಕ್ಕದ್ದು ಮತ್ತು ಸರ್ಕಾರದ ಆದೇಶ ಸಂಖ್ಯೆ : ಇಪಿ 100 ಪಿಜಿಸಿ 22024 ದಿನಾಂಖ 26.06.2024 ರಲ್ಲಿ ಈಗಾಗಲೇ ಎಲ್ ಕೆಜಿ ಪ್ರವೇಶಾತಿಗೆ 4 ವರ್ಷ ಮತ್ತು ಯು . ಕೆ . ಜಿ ಪ್ರವೇಶಾತಿಗೆ 5 ವರ್ಷಗಳ ಕನಿಷ್ಠ ವಯೋಮಿತಿ ನಿಗಧಿಪಡಿಸಲಾಗಿರುತ್ತದೆ . ಅದರಂತೆ 2025-26 ನೇ ಶೈಕ್ಷಣಿಕ ವರ್ಷದಿಂದ ಎಲ್ . ಕೆ . ಜಿ . ಅಥವಾ ತತ್ಸಮಾನ ದಾಖಲಾತಿಗೆ 4 ವರ್ಷ ಪೂರ್ಣಗೊಂಡಿರುವ ಮತ್ತು ಯು . ಕೆ . ಜಿ ಅಥವಾ ತತ್ಸಮಾನ ದಾಖಲಾತಿಗೆ 5 ವರ್ಷ ಪೂರ್ಣಗೊಂಡಿರುವ ಮಕ್ಕಳನ್ನು ಮಾತ್ರ ದಾಖಲಿಸಿಕೊಳ್ಳತಕ್ಕದ್ದು .
ಮಕ್ಕಳನ್ನುಶಾಲೆಗೆಸೇರಿಸುವಾಗಈದಾಖಲೆಗೂಹೊಂದಿರುವುದುಕಡ್ಡಾಯ
ಮಕ್ಕಳಜನನಪ್ರಮಾಣಪತ್ರ
ಆಸ್ಪತ್ರೆದಾಖಲೆ
ಅಂಗನವಾಡಿ
ಆರೋಗ್ಯಸಹಾಯಕಿಯರದೃಢೀಕರಣ
ಆಧಾರ್ ಕಾರ್ಡ್
ಇಲ್ಲವೇಪೋಷಕರುನೀಡುವಸ್ವಯಂದೃಢೀಕರಿಸಿದಪ್ರಮಾಣಪತ್ರಸೇರಿದಂತೆಯಾವುದಾದರೂಒಂದುದಾಖಲೆಸಲ್ಲಿಸಬೇಕು.