ಮೆ.31 ಸುಳ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಕಡೆಗಳಲ್ಲಿ ಬರೆ ಕುಸಿತ ಸಂಭವಿಸಿದ್ದು, ವಿದ್ಯುತ್ ಕಂಬಗಳು ಧರಾಶಾಹಿಯಾದ ಕಾರಣ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.
ಸುಳ್ಯದ ಜೂನಿಯರ್ ಕಾಲೇಜ್ ಬಳಿಯ ನಿವಾಸಿ ಮುಹಮ್ಮದ್ ಮಲ್ನಾಡ್ ಎಂಬವರ ಮನೆಯ ಹಿಂದಿನ ಬೃಹತ್ ಗಾತ್ರದ ಕಾಂಪೌಂಡ್ ಗೋಡೆಯು ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ಜೂನಿಯರ್ ಕಾಲೇಜ್ ಬಳಿಯ ಮೂರನೇ ಅಡ್ಡರಸ್ತೆಯಲ್ಲಿ ನಿಧಾನವಾಗಿ ಬರೆ ಕುಸಿಯುತ್ತಿದ್ದು, ಪ್ರಮುಖ ರಸ್ತೆಯೇ ಕುಸಿದು ಬೀಳುವ ಅಪಾಯ ಎದುರಾಗಿದೆ.